ಟಾಸ್ ಸಮಯದಲ್ಲಿ ಶಾರ್ಟ್ಸ್ ಧರಿಸಿದ್ದ ಕೊಹ್ಲಿ:
ಕ್ರಿಕೆಟ್
ಟಾಸ್ ಸಮಯದಲ್ಲಿ ಶಾರ್ಟ್ಸ್ ಧರಿಸಿದ್ದ ಕೊಹ್ಲಿ: ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ
ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಭಾರತ ತಂಡ ನಾಲ್ಕು ದಿನಗಳ ಕಾಲ ನಡೆಸಲಿರುವ ಅಭ್ಯಾಸ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಾರ್ಟ್ಸ....
ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಭಾರತ ತಂಡ ನಾಲ್ಕು ದಿನಗಳ ಕಾಲ ನಡೆಸಲಿರುವ ಅಭ್ಯಾಸ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಾರ್ಟ್ಸ್ ಧರಿಸಿ ಪಾಲ್ಗೊಂಡಿದ್ದದ್ದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಾಲ್ಕು ದಿನದ ಆಟದಲ್ಲಿ ಮೊದ ದಿನದ ಆಟವು ಮಳೆಯಿಂದ ರದ್ದಾಗಿದ್ದು ಎರಡನೇ ದಿನದಾಟ್ ಪ್ರಾರಂಭಕ್ಕೆ ಮುನ್ನ ಕೊಹ್ಲಿ ಶಾರ್ಟ್ಸ್ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದು ಟಾಸ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಟಾಸ್ ಪ್ರಕ್ರಿಯೆಯ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು ಕೊಹ್ಲಿ ಕ್ರೀಡೆಗೆ ಅಗೌರವ ತೋರಿದ್ದಾರೆಂದು ಅವರ ಅಭಿಮಾನಿಗಳು ವ್ಯಾಪಕವಾಗಿ ಆಕ್ರೋಶ ಹೊರಹಾಕಿದ್ದಾರೆ.
ಎರಡನೇ ದಿನ ಟಾಸ್ ಗೆದ್ದ ಆಸ್ಟ್ರೇಲಿಯಾ ಇಲೆವೆನ್ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತ್ತು. ಭಾರತ ತಂಡ 92 ಓವರ್ಗಳಲ್ಲಿ 358 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಪೃಥ್ವಿ ಷಾ (66), ಕೊಹ್ಲಿ (64), ಅಜಿಂಕ್ಯ ರಹಾನೆ (56), ಚೇತೇಶ್ವರ ಪೂಜಾರ (54) ಮತ್ತು ಹನುಮ ವಿಹಾರಿ (53) ರನ್ ಗಳಿಸಿದ್ದರು. ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಇಲೆವೆನ್ ನಾಲ್ಕು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.
@ImViratkohli @imVkohli , you are amazing but it doesn’t mean that you will forget the basics ! Wearing shorts in a toss during a warmup match is completely not acceptable! You still have a long career ahead and I am sure you will break all the records !!!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ