ಕೊನೆಗೂ ಗೆದ್ದ ಮಿಥಾಲಿ ರಾಜ್, ಹೊಸ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!

ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ರಮೇಶ್ ಪವಾರ್ ವಿರುದ್ಧ ಮಾಜಿ ನಾಯಿಕ ಮಿಥಾಲಿ ರಾಜ್ ಅವರು ಸಿಡಿದೆದ್ದಿದ್ದರು. ಇದು ಟೀಂ ವುಮೆನ್ ಇಂಡಿಯಾದಲ್ಲಿ ಬಿರುಗಾಳಿ ಎದ್ದಿತ್ತು...
ಮಿಥಾಲಿ ರಾಜ್-ರಮೇಶ್ ಪವಾರ್
ಮಿಥಾಲಿ ರಾಜ್-ರಮೇಶ್ ಪವಾರ್
ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ರಮೇಶ್ ಪವಾರ್ ವಿರುದ್ಧ ಮಾಜಿ ನಾಯಿಕ ಮಿಥಾಲಿ ರಾಜ್ ಅವರು ಸಿಡಿದೆದ್ದಿದ್ದರು. ಇದು ಟೀಂ ವುಮೆನ್ ಇಂಡಿಯಾದಲ್ಲಿ ಬಿರುಗಾಳಿ ಎದ್ದಿತ್ತು. 
ಭಾರತ ತಂಡದಲ್ಲಿನ ಹಲವು ಲೋಪಗಳು ಬಹಿರಂಗವಾಗಿದ್ದವು. ಇದರಿಂದ ಎಚ್ಚೆತ್ತಿರುವ ಬಿಸಿಸಿಐ ಮಹಿಳಾ ತಂಡ ಕೋಚ್ ರಮೇಶ್ ಪವಾರ್ ಅವರನ್ನು ತಂಡದ ಕೋಚ್ ಆಗಿ ಮುಂದುವರೆಸದಿರಲು ತೀರ್ಮಾನಿಸಿದೆ. 
ಮಹಿಳಾ ಟಿ20 ವಿಶ್ವಕಪ್ ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವ ಎಲ್ಲ ಲಕ್ಷಣ ತೋರಿದ್ದ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ ರನ್ನು ಕೈಬಿಡಲಾಗಿತ್ತು. 
ಸೆಮಿಫೈನಲ್ ಪಂದ್ಯ ಸೋಲಿನ ಬಳಿಕ ಮಾತನಾಡಿದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಿಥಾಲಿ ರಾಜ್ ಕೈ ಬಿಟ್ಟಿದ್ದಕ್ಕೆ ವಿಷಾದವಿಲ್ಲ ಎಂದು ಹೇಳಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಇದಾದ ನಂತರ ಮಹಿಳಾ ತಂಡದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಕೋಚ್ ಬದಲಾವಣೆ ಮೂಲಕ ವಿವಾದ ತಣ್ಣಗಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com