ವಿದೇಶಿ ಕ್ರಿಕೆಟ್ ಕ್ಲಬ್‌ನಲ್ಲೂ ಕನ್ನಡದ ಕಂಪು, ಕನ್ನಡದಲ್ಲಿ ಕ್ರಿಕೆಟ್ ನಿಯಮ ಪ್ರಕಟಿಸಿದ ಮರ್ಲೊಬೋನ್ ಕ್ಲಬ್!

ಬೆಂಗಳೂರಿನ ಅಂಪೈರ್ ವಿನಾಯಕ ಕುಲಕರ್ಣಿ ಅವರು ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನಿಯಮಗಳಲ್ಲಿ ಆದ ಬದಲಾವಣೆಗಳನ್ನು ಒಳಗೊಂಡ ಕ್ರಿಕೆಟ್ ನಿಯಮಗಳು-2017...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಬೆಂಗಳೂರಿನ ಅಂಪೈರ್ ವಿನಾಯಕ ಕುಲಕರ್ಣಿ ಅವರು ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನಿಯಮಗಳಲ್ಲಿ ಆದ ಬದಲಾವಣೆಗಳನ್ನು ಒಳಗೊಂಡ ಕ್ರಿಕೆಟ್ ನಿಯಮಗಳು-2017 ಪುಸ್ತಕವನ್ನು ಬರೆದಿದ್ದು ಇದನ್ನು ಇಂಗ್ಲೆಂಡ್ ನ ಪ್ರತಿಷ್ಠಿತ ಮರ್ಲೊಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ತನ್ನ ವೈಬ್ ಸೈಟ್ ನಲ್ಲಿ ಪ್ರಕಟಿಸಿ ಗೌರವ ನೀಡಿದೆ. 
ಅಂಪೈರ್ ಗಳ ಗುಣಮಟ್ಟ ಸುಧಾರಿಸುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಾಗಪುರದಲ್ಲಿ ಅಂಪೈರ್ ಗಳ ಅಕಾಡೆಮಿ ಆರಂಭಿಸಿತ್ತು. ಈ ಅಕಾಡೆಮಿಯ ಮೊದಲ ಕೋಚ್ ಕೂಡ ಆಗಿದ್ದ ವಿನಾಯಕ ಕುಲಕರ್ಣಿ ಅವರು 2013ರಲ್ಲಿ ಪುಸ್ತಕ ಬರೆದಿದ್ದರು. ಇದೀಗ ಹಿಂದಿನ ಪುಸ್ತಕದ ಮಾಹಿತಿ ಸೇರಿದಂತೆ ಈಗ ಇನ್ನಷ್ಟು ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದರು. ಎಂಸಿಸಿ ಮೊದಲ ಬಾರಿಗೆ ಕನ್ನಡದಲ್ಲಿ ನಿಯಮಗಳನ್ನು ಪ್ರಕಟಿಸಿದೆ. 
ಮೈದಾನದಲ್ಲಿ ಅಂಪೈರ್ ಗಳು ಹೇಗೆ ನಡೆದುಕೊಳ್ಳಬೇಕು, ಆಟಗಾರರ ಜವಾಬ್ದಾರಿಗಳೇನು, ನಿಯಮಕ್ಕೆ ಅನುಗುಣವಾಗಿ ಪಂದ್ಯಗಳನ್ನು ಹೇಗೆ ನಡೆಸಬೇಕು ಎನ್ನುವ ವಿವರವಿದೆ. ಚೆಂಡಿನ ತೂಕ, ಯಾವ ಸಂದರ್ಭದಲ್ಲಿ ಹೊಸ ಚೆಂಡು ನೀಡಬೇಕು, ಪಿಚ್ ಸಿದ್ಧತೆ, ಸ್ಕೋರರ್ ಗೆ ತೋರಿಸಬೇಕಾದ ಸಂಕೇತಗಳ ಬಗ್ಗೆ ವಿನಾಯಕ್ ಅವರು 124 ಪುಟಗಳ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com