• Tag results for ಕನ್ನಡ

'ಡಿಟಿಎಸ್' ಅಬ್ಬರ: ಕನ್ನಡಕ್ಕೆ ಪಾದಾರ್ಪಣೆ ಮಾಡಲಿರುವ ತೆಲುಗು ನಟ ಸುನಿಲ್ ವರ್ಮಾ

ತೆಲುಗಿನ ಖ್ಯಾತ ನಟ ಸುನಿಲ್ ವರ್ಮಾ ಇದೀಗ ಕನ್ನಡದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದು, ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ಡಿಟಿಎಸ್ ಅನ್ನು ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

published on : 16th April 2021

ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ 

ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರ ಬಗ್ಗೆ ಸಮೀಕ್ಷೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವರದಿ ಸಲ್ಲಿಸಲಿದೆ.

published on : 15th April 2021

'ರಿವೈಂಡ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ ನಟ ತೇಜ್!

ಬಾಲನಟನಾಗಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದ  ನಟ ತೇಜ್ ಹಲವು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

published on : 15th April 2021

ಕೊರೋನಾ ಉಲ್ಬಣದ ನಡುವೆ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಸದಸ್ಯರಲ್ಲಿ ಆತಂಕ

ಒಕ್ಕಲಿಗರ ಸಂಘಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು ಸಂಘವು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುವಂತೆ ಮತದಾರರನ್ನು ಮನವಿ ಮಾಡಿದೆ. ಆದರೆ ಕೋವಿಡ್ ಸೋಂಕು ತಾರಕ್ಕೇರಿರುವ ಈ ಸಮಯದಲ್ಲಿ ಸಂಘವು ತನ್ನ ಮೇ 16 ರ ಚುನಾವಣೆಯನ್ನು ಹೇಗೆ ನಡೆಸಲಿದೆ ಎನ್ನುವುದು ಪ್ರಶ್ನೆಯಾಗಿ

published on : 13th April 2021

ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್'ರ ಆ ಎರಡು ಟ್ವೀಟ್ ಗೆ ನೆಟ್ಟಿಗರು ಕ್ಲೀನ್ ಬೌಲ್ಡ್! 

ಆನ್ ಫೀಲ್ಡ್ ನಲ್ಲಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ಬೌಲಿಂಗ್ ವೈಖರಿಗೆ ಮನಸೋತಿದ್ದ ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಟ್ವೀಟ್ ಗಳನ್ನು ಆಸ್ವಾದಿಸುತ್ತಿದ್ದಾರೆ. 

published on : 12th April 2021

ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ 'ಮಹಾನ್ ಹುತಾತ್ಮ' ಏಪ್ರಿಲ್ 9 ಕ್ಕೆ ಬಿಡುಗಡೆ

2018ರಲ್ಲಿ ಅತ್ಯುತ್ತಮ ಕಿರುಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ, ಬಳಿಕ ಸುಮಾರು 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ “ಮಹಾನ್‌ ಹುತಾತ್ಮ’ ಕಿರುಚಿತ್ರ ಏಪ್ರಿಲ್ 9 ರಂದು ಬಿಡುಗಡಯಾಗಲಿದೆ. 

published on : 8th April 2021

'ಶುಗರ್ ಫ್ಯಾಕ್ಟರಿ'ಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್!

ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಜನಸಾಮಾನ್ಯರ ವಿಭಾಗದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಶಶಿಕುಮಾರ್ ಅವರು ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

published on : 31st March 2021

ಕೊರೋನಾ ಉಲ್ಬಣ: ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ

ಕೊರೋನಾವೈರಸ್ ಎರಡನೇ ಅಲೆ ಪ್ರಭಾವದಿಂದ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ನಿಷೇಧ ಹೇರಿದ್ದಾರೆ.

published on : 30th March 2021

ಪಶ್ಚಿಮ ಘಟ್ಟದಲ್ಲಿ ಅರಣ್ಯ ತೆರವು: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಳ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳ ಹಿಂದೆ ಯಲ್ಲಾಪುರದ ಸಂತೇಬೈಲ್ ಇಡಗುಂಡಿ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ  ನಾಲ್ಕು ಮಂದಿ ಕಾರ್ಮಿಕರು ಜೀವಂತ ಸಮಾಧಿಯಾದರು.

published on : 25th March 2021

ಸ್ಯಾಂಡಲ್ ವುಡ್ ಗೆ ಮತ್ತೆ ಬಂದ 'ಮಾದಕ' ಚೆಲುವೆ: ಕನ್ನಡ ಸಿನಿಮಾ ಹಾಡಿಗೆ 'ಸನ್ನಿ' ಹೆಜ್ಜೆ!

ನಟಿ ಸನ್ನಿ ಲಿಯೋನ್ ಕನ್ನಡ ಸಿನಿಮಾಕ್ಕೆ ಮರಳಿದ್ದಾರೆ. ಈ ಮೊದಲು 'ಲವ್ ಯೂ ಆಲಿಯಾ', 'ಡಿ.ಕೆ' ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಸೊಂಟ ಕುಣಿಸಿದ್ದ ಸನ್ನಿ ಲಿಯೋನ್ ಈಗ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಮಾದಕ ನೃತ್ಯ ಮಾಡುತ್ತಿದ್ದಾರೆ

published on : 25th March 2021

ಕನ್ನಡ ಶಾಲೆಗಳಿಗೆ 150 ಕೋಟಿ ರು ಅನುದಾನ ನೀಡಿ: ಸಿಎಂ ಗೆ ಶಿಕ್ಷಣ ಸಚಿವರ ಪತ್ರ

1995 ರಿಂದ 2000ರ ವರೆಗೆ ಸ್ಥಾಪಿತವಾದ ಅನುದಾನರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದಕ್ಕೆ 150 ಕೋಟಿ ರೂ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. 

published on : 25th March 2021

ಕನ್ನಡಿಗರ ಕಡೆಗಣನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ, ಪ್ರತಿಕ್ರಿಯೆ ನೀಡುವಂತೆ ಖಾಸಗಿ ಕಂಪನಿಗಳಿಗೆ ನೋಟಿಸ್ ಜಾರಿ!

ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಕನ್ನಡಿಗರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಈ ಕುರಿತು ಶೀಘ್ರಗತಿಯಲ್ಲಿ ಪ್ರತಿಕ್ರಿಯೆ ನೀಡುವಂತೆ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಿದೆ.

published on : 24th March 2021

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 'ಅಕ್ಷಿ' ಅತ್ಯುತ್ತಮ ಚಲನಚಿತ್ರ

 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ 'ಅಕ್ಷಿ' ಅತ್ಯುತ್ತಮ ಚಲನಚಿತ್ರ ಪುರಸ್ಕಾರಕ್ಕೆ ಪಾತ್ರವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರ್, ಹಿಂದಿಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

published on : 22nd March 2021

ಎಂಇಎಸ್, ಶಿವಸೇನೆ ವಿರುದ್ಧ ಬೆಳಗಾವಿಯಲ್ಲಿ ಕನ್ನಡ ಪರ ಕಾರ್ಯಕರ್ತರಿಂದ ಪ್ರತಿಭಟನೆ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರ ವಿರುದ್ಧ ಕನ್ನಡ ಪರ ಕಾರ್ಯಕರ್ತರು ಗುರುವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

published on : 19th March 2021

ಶಿರಸಿ: ತಂದೆ ಶವ ಸಂಸ್ಕಾರಕ್ಕೆ ಹೂ ತರಲು ಹೋಗಿದ್ದ ಪುತ್ರ ಸಾವು

ತಂದೆಯ ಶವ ಸಂಸ್ಕಾರಕ್ಕೆ ಹೂ ತರಲು ಹೋಗಿದ್ದ ಪುತ್ರ ಕೂಡ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

published on : 15th March 2021
1 2 3 4 5 6 >