ಟೀಂ ಇಂಡಿಯಾ ಬಳಿಕ, ಭಾರತ ಅಂಡರ್ 19 ತಂಡ 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್!

ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಇದೀಗ ಅಂಡರ್ 19 ಟೀಂ ಇಂಡಿಯಾ ಸಹ ಶ್ರೀಲಂಕಾ ತಂಡವನ್ನು...
ಟೀಂ ಇಂಡಿಯಾ
ಟೀಂ ಇಂಡಿಯಾ
ಮೀರ್ ಪುರ: ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಇದೀಗ ಅಂಡರ್ 19 ಟೀಂ ಇಂಡಿಯಾ ಸಹ ಶ್ರೀಲಂಕಾ ತಂಡವನ್ನು 144 ರನ್ ಗಳಿಂದ ಮಣಿಸಿ 6ನೇ ಬಾರಿಗೆ ಅಂಡರ್ 19 ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿತ್ತು. 305 ರನ್ ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 160 ರನ್ ಗಳಿಗೆ ಸರ್ವಪತನ ಕಂಡಿದ್ದು 144 ರನ್ ಗಳಿಂದ ಭಾರತಕ್ಕೆ ಶರಣಾಯಿತು. 
ಭಾರತ ಪರ ಜೈಸ್ವಾಲ್ 85, ಪ್ರಭ್ ಸಿಮ್ರಾನ್ ಸಿಂಗ್ 65 ಅನೂಜ್ ರಾವುತ್ 57 ಹಾಗೂ ಆಯೂಷ್ ಬದೋನಿ ಅಜೇಯ 52 ರನ್ ಸಿಡಿಸಿದರು. ಭಾರತದ ಹರ್ಷ್ ತ್ಯಾಗಿ 38 ರನ್ ನೀಡಿ ಲಂಕಾದ ಪ್ರಮುಖ 6 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. 
ಭಾರತ 1989ರಲ್ಲಿ ಚೊಚ್ಚಲ ಅಂಡರ್ 19 ಏಷ್ಯಾಕಪ್ ಜಯಿಸಿತ್ತು. ಆ ಬಳಿಕ ಸತತ ನಾಲ್ಕು ಬಾರಿ(2003, 2012, 201314 ಹಾಗೂ 2016) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2017ರಲ್ಲಿ ಆಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಅಂಡರ್ 19 ಏಷ್ಯಾ ಕಪ್ ಜಯಿಸಿದ ಸಾಧನೆ ಮಾಡಿತ್ತು. ನಂತರ ಇದೀಗ ಆರನೇ ಬಾರಿಗೆ ಭಾರತ ಚಾಂಪಿಯನ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com