ಕ್ರಿಕೆಟ್ ಟಿ20 ಇತಿಹಾಸದಲ್ಲೇ ಕಳಪೆ ದಾಖಲೆ, 6 ಡಕೌಟ್, 9 ರನ್‍ಗೆ ತಂಡವೇ ಆಲೌಟ್!

ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಕಳಪೆ ದಾಖಲೆಗಳು ದಾಖಲಾಗುತ್ತವೆ. ಕೌಲಾಲಂಪುರದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟಿ20 ಏಷ್ಯಾ ಪ್ರದೇಶಿಕ ಕ್ವಾಲಿಫೈಯರ್ ಬಿ...
ಮಲೇಷ್ಯಾ ತಂಡ
ಮಲೇಷ್ಯಾ ತಂಡ
Updated on: 
ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಕಳಪೆ ದಾಖಲೆಗಳು ದಾಖಲಾಗುತ್ತವೆ. ಕೌಲಾಲಂಪುರದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟಿ20 ಏಷ್ಯಾ ಪ್ರದೇಶಿಕ ಕ್ವಾಲಿಫೈಯರ್ ಬಿ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ ಮಲೇಷ್ಯಾ ಅಮೋಘ ಜಯ ದಾಖಲಿಸಿದೆ. 
ಮೊದಲ ಬ್ಯಾಟಿಂಗ್ ಮಾಡಿದ ಮ್ಯಾನ್ಮಾರ್ ತಂಡ ಮಳೆಯಿಂದಾಗಿ 10.1 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 9 ರನ್ ಮಾತ್ರ ಗಳಿಸಿತ್ತು. 10 ರನ್ ಗಳ ಬೆನ್ನಟ್ಟಿದ ಮಲೇಷ್ಯಾ 10 ಎಸೆತಗಳಲ್ಲಿ 10 ರನ್ ಪೇರಿಸಿದ ಗೆಲುವಿನ ನಗೆ ಬೀರಿತು. 
ಪವನ್ ದೀಪ್ ಸಿಂಗ್ ತಮ್ಮ ನಾಲ್ಕು ಓವರ್ ಗಳಲ್ಲಿ ಕೇವಲ 1 ರನ್ ಮಾತ್ರ ನೀಡಿ ಐದು ವಿಕೆಟ್ ಕಬಳಿಸಿದರು. ಇದರಲ್ಲಿ ಮೂರು ಮೇಡನ್ ಓವರ್ ಗಳು ಸೇರಿವೆ. 
ಮ್ಯಾನ್ಮಾರ್ ಪರ ಬ್ಯಾಟ್ಸ್ ಮನ್ ಗಳ ಸ್ಕೋರ್ ಕಾರ್ಡ್ ಇಂತಿದೆ. 0, 0, 0, 2, 1, 0, 0, 3*, 0, 0* ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com