ನವದೆಹಲಿ: ಟೀಂ ಇಂಡಿಯಾದ ಮಾಜಿ ಬಲಗೈ ಸ್ಪಿನ್ನರ್ ಅನಿಲ್ ಕುಂಬ್ಳೆ ವಿಮಾನದಲ್ಲಿ ಭೇಟಿಯಾಗಲು ಹೆದರುತ್ತಿದ್ದ ಅಭಿಮಾನಿಯನ್ನು ಕರೆದು ಮಾತನಾಡಿರುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಟೀಂ ಇಂಡಿಯಾದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಟೀಂ ಇಂಡಿಯಾ ತಂಡದಲ್ಲಿ ಅತ್ಯಂತ ಶಿಸ್ತು ಬದ್ಧ ಕ್ರಿಕೆಟಿಗ ಎಂದೆನಿಸಿಕೊಂಡಿದ್ದರು. ಕ್ರಿಕೆಟ್ ಬಳಿಕ ತಂಡ ಕೋಚ್ ಆಗಿದ್ದ ಅವರು ತಮ್ಮ ಹುದ್ದೆಯಲ್ಲೂ ಇದೇ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಮೈದಾನದ ಹೊರಗೆಡೆಯೂ ಸಭ್ಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಕುಂಬ್ಳೆ ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳುತ್ತಿದ್ದಾಗ ಅವರ ಅಭಿಮಾನಿ ಸೊಹಿನಿ ಎಂಬುವರು ಅನಿಲ್ ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಜಂಜೋ ಸಾಧನೆಗಳನ್ನು ಉಲ್ಲೇಖಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ದವಡೆ ಮುರಿದುಕೊಂಡರೂ ಛಲವಾದಿ ಕುಂಬ್ಳೆ ಭಾರತ ತಂಡಕ್ಕಾಗಿ ನೀಡಿರುವ ಸೇವೆಯನ್ನು ನೆನಪಿಸಿಕೊಂಡರು.
The legendary @anilkumble1074 in my BLR-MUM flight. Glanced at him once and was reminded of that game in West Indies where he bowled with a bandaged jaw. Teared up a bit. Gawwddd, I'm such a sucker for cricket memories.