ಬೆಂಗಳೂರು: ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಘಟಾನುಘಟಿಗಳಿಗೆ ನಡುಕ ಉಂಟು ಮಾಡಿರುವ #MeToo ಅಭಿಯಾನ ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗೂ ಬಿಸಿ ಮುಟ್ಟಿಸಿದ್ದು, ಭಾರತೀಯ ಕ್ರಿಕೆಂಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಸಿಇಒ ರಾಹುಲ್ ಜೋಹ್ರಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.