2ನೇ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು 'ಐತಿಹಾಸಿಕ ದಾಖಲೆ' ಬರೆದ ಟೀಂ ಇಂಡಿಯಾ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. 
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ 72 ರನ್ ಗಳ ಗುರಿ ಪಡೆದಿದ್ದು ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಯುವ ಕ್ರಿಕೆಟಿಗ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. 
56 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಬೌಲರ್ ಗಳ ಮಾರಕದಾಳಿಯಿಂದ 127 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ವೆಸ್ಟ್ ಇಂಡೀಸ್ ಟೀಂ ಇಂಡಿಯಾಗೆ ಗೆಲ್ಲಲು 72 ರನ್ ಗಳ ಗುರಿ ನೀಡಿತು. ಟೀ ಇಂಡಿಯಾ ಪರ ರಾಹುಲ್ ಅಜೇಯ 33 ರನ್ ಹಾಗೂ ಪೃಥ್ವಿ ಶಾ ಅಜೇಯ 33 ರನ್ ಪೇರಿಸಿ ಗೆಲುವು ತಂದುಕೊಟ್ಟರು. 
ಎರಡನೇ ದಿನ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 308 ಗಳಿಸಿದ ಟೀಂ ಇಂಡಿಯಾ ಮೂರನೇ ದಿನದಾಟದಂದೂ ಉಳಿದ ವಿಕೆಟ್ ಗಳನ್ನು ಕಳೆದುಕೊಂಡು 59 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಒಟ್ಟಾರೇ 367 ರನ್ ಪಡೆದುಕೊಂಡಿತು.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹಾಗೂ ಅಜಿಂಕ್ಯಾ ರಹಾನೆ ಅವರ ಮುರಿಯದ ಜೊತೆಯಾಟದಿಂದ 146 ರನ್  ಹರಿದುಬಂದಿತ್ತು. ರಿಷಬ್ ಪಂತ್ 92 ಹಾಗೂ ರಹಾನೆ 80 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು.
ಕಳೆದ ಪಂದ್ಯದಲ್ಲಿ ಕೆರಿಬಿಯನ್ನರ ವಿರುದ್ಧ  ಚೊಚ್ಚಲ ಶತಕ ದಾಖಲಿಸಿದ್ದ ಅಲ್ ರೌಂಡರ್  ರವೀಂದ್ರ  ಜಡೇಜಾ, ಈ ಪಂದ್ಯದಲ್ಲಿ ಡೆಕ್ ಜೌಟ್ ಆಗುವ ಮೂಲಕ  ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದರು. ಸ್ಪಿನ್ನರ್ ಆರ್. ಅಶ್ವಿನ್ 35 ರನ್ ಗಳಿಸುವ ಮೂಲಕ ಟೀಂ ಇಂಡಿಯಾ 350ರ ಗಡಿ ದಾಟಲು  ನೆರವಾಯಿತು.
ವೆಸ್ಟ್ ಇಂಡೀಸ್ ಪರ ಹೌಲ್ 5 ಹಾಗೂ ವೇಗಿ ಶಾನನ್ ಗ್ಯಾಬ್ರೀಲ್ 3 ವಿಕೆಟ್ ಗಳನ್ನು ಪಡೆದುಕೊಂಡರು.
ವೆಸ್ಟ್ ಇಂಡೀಸ್ ವಿರುದ್ಧದ  ಸರಣಿಯಲ್ಲಿ ಭಾರತ ಪ್ರಸ್ತುತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2013 ರಿಂದ ಸ್ವದೇಶದಲ್ಲಿ ಸತತ 10 ಸರಣಿ ಗೆದ್ದು ಐತಿಹಾಸಿಕ ದಾಖಲೆ ಮಾಡಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ನಿಶ್ಚಿಯವಾಗಿದೆ. ವೆಸ್ಟ್ ಇಂಡೀಸ್ ಭಾರತಕ್ಕೆ 72 ರನ್ ಗಳ ಗುರಿ ನೀಡಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com