ಪೃಥ್ವಿ ಶಾ-ಇಯಾನ್ ಗೌಲ್ಡ್
ಪೃಥ್ವಿ ಶಾ-ಇಯಾನ್ ಗೌಲ್ಡ್

ಪೃಥ್ವಿ ಶಾಗೆ ಜೀವದಾನ: ಮುಜುಗರ ಪಟ್ಟು ಹೋಲ್ಡರ್ ಬಳಿ ಕ್ಷಮೆಯಾಚಿಸಿದ ಅಂಪೈರ್, ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಸನ್ನಿವೇಶವೊಂದು ನಡೆದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ...
ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಸನ್ನಿವೇಶವೊಂದು ನಡೆದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಎಲ್ ಬಿಡಬ್ಲ್ಯೂಗೆ ಔಟ್ ಆದರೂ ಅಂಪೈರ್ ಗೌಲ್ಡ್ ಔಟ್ ನೀಡದ ಘಟನೆ ನಡೆದಿದೆ. 
ಇನ್ನು ಇದನ್ನು ಟಿವಿ ರೀಪ್ಲೇನಲ್ಲಿ ನೋಡಿದಾಗ ಶಾ ಎಲ್ ಬಿಡಬ್ಲ್ಯೂ ಔಟ್ ಆಗಿರುವುದು ಕಂಡ ಅಂಪೈರ್ ಗೌಲ್ಡ್ ಬೆಪ್ಪಾಗಿ, ಮುಜುಗರ ಪಟ್ಟು ವೆಸ್ಟ್ ಇಂಡೀಸ್ ಬೌಲರ್ ಹೋಲ್ಡರ್ ಬಳಿ ಕ್ಷಮೆಯಾಚಿಸಿದ್ದಾರೆ. 
ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡುತ್ತಿದ್ದ ಪೃಥ್ವಿ ಶಾ ಇನ್ನಿಂಗ್ಸ್ ನ 5ನೇ ಓವರ್ ನಲ್ಲಿ ಜೇಸನ್ ಹೋಲ್ಡರ್ ಅವರ ಶಾರ್ಟ್ ಬಾಲ್ ಎಸೆತವನ್ನು ಗಮನಿಸುವಲ್ಲಿ ಶಾ ವಿಫಲರಾಗಿದ್ದರು. ಹೈ ಪಿಚ್ ಆಗಲಿದೆ ಎಂದು ಪೃಥ್ವಿ ಶಾ ಬಗ್ಗಿದಾಗ ಚೆಂಡು ಅವರ ಭುಜಕ್ಕೆ ಬಡಿಯಿತು. 
ತಕ್ಷಣ ಹೋಲ್ಡರ್ ಎಲ್ ಬಿಡಬ್ಲ್ಯೂಗೆ ಮನವಿ ಸಲ್ಲಿಸುತ್ತಾರೆ. ಆದರೆ ಅಂಪೈರ್ ಔಟ್ ಕೊಡಲು ನಿರಾಕರಿಸಿದಾಗ ಬೌಲರ್ ಹೋಲ್ಡರ್ ಮೂರನೇ ಅಂಪೈರ್ ಮೊರೆ ಹೋಗುತ್ತಾರೆ. ಡಿಆರ್ಎಸ್ ರ ರಿಪ್ಲೇ ವಿಡಿಯೋದಲ್ಲಿ ಚೆಂಡು ನೇರವಾಗಿ ಬೇಲ್ ಗೆ ತಾಕುವಂತಿರುವ ಸುಳಿವು ಕೊಡುತ್ತದೆ. ಆದರೆ ಆನ್ ಫೀಲ್ಡ್ ಅಂಪೈರ್ ನಾಟ್ ಔಟ್ ಹೇಳಿದ್ದರಿಂದ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com