3ನೇ ಏಕದಿನ ಪಂದ್ಯ: ಟೀಂ ಇಂಡಿಯಾ ಗೆಲ್ಲಲು 284 ರನ್ ಟಾರ್ಗೆಟ್ ನೀಡಿದ ವಿಂಡೀಸ್

ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ...
ಜಸ್ ಪ್ರೀತ್ ಬುಮ್ರಾ ಸಂಭ್ರಮ
ಜಸ್ ಪ್ರೀತ್ ಬುಮ್ರಾ ಸಂಭ್ರಮ
ಪುಣೆ: ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್, ಟೀಂ ಇಂಡಿಯಾ ಗೆಲ್ಲಲು 284 ರನ್ ಗಳ ಟಾರ್ಗೆಟ್ ನೀಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ಶಾಯ್ ಹೋಪ್(95) ಸಮಯೋಚಿತ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ಆಶ್ಲೇ ನರ್ಸ್(40) ಉಪಯುಕ್ತ ಇನ್ನಿಂಗ್ಸ್ ಗಳ ನೆರವಿನಿಂದ ನಿಗಧಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 283 ರನ್‌ ಗಳಿಸಿದೆ.
ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಪೊವೆಲ್ 21, ಹೆಮ್ರಾರ್ 15, ಸಾಮೂಯಲ್ಸ್ 9, ಹೆಟ್ಮರ್ 37 ಹಾಗೂ ಪೊವೆಲ್ 4, ಹೋಲ್ಡರ್‌ 32, ಅಲೆನ್‌ 5, ಆಶ್ಲಿ ನರ್ಸ್ 40 ರನ್‌ ಮತ್ತು ರೋಚ್‌ 15, ಕೆಮರ್‌ ಅಜೇಯರಾಗಿ ಉಳಿದರು.
ಭಾರತ ಪರ ಜಸ್ ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ,  ಕುಲದೀಪ್ ಯಾದವ್ ತಲಾ 2, ಚಾಹಲ್, ಜಡೇಜಾ ಹಾಗೂ ಕಲೀಲ್ ಅಹಮ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com