ವೀಂಡಿಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯ: ಜಯದ ಲಯಕ್ಕೆ ಮರಳಲು ಭಾರತ ಸಜ್ಜು

ವಾಣಿಜ್ಯ ರಾಜಧಾನಿ ಮುಂಬೈಯ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕ ದಿನ ಪಂದ್ಯ ನಡೆಯಲಿದ್ದು, ಹಿಂದಿನ ಪಂದ್ಯದ ಸೋಲು ತೀರಿಸಿಕೊಂಡು ಜಯದ ಲಯಕ್ಕೆ ಮರಳು ಟೀಂ ಇಂಡಿಯಾ ಸಜ್ಜುಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ:  ವಾಣಿಜ್ಯ ರಾಜಧಾನಿ ಮುಂಬೈಯ ಬ್ರೆಬೋರ್ನ್  ಕ್ರೀಡಾಂಗಣದಲ್ಲಿ ಇಂದು ವೆಸ್ಟ್  ಇಂಡೀಸ್ ವಿರುದ್ಧದ ನಾಲ್ಕನೇ ಏಕ ದಿನ ಪಂದ್ಯ ನಡೆಯಲಿದ್ದು, ಹಿಂದಿನ ಪಂದ್ಯದ ಸೋಲು ತೀರಿಸಿಕೊಂಡು ಜಯದ ಲಯಕ್ಕೆ  ಮರಳಲು ಟೀಂ ಇಂಡಿಯಾ ಸಜ್ಜುಗೊಂಡಿದೆ.

ಪುಣೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ವೆಸ್ಟ್ ಇಂಡೀಸ್,  ನಾಲ್ಕನೇ  ಏಕದಿನ ಪಂದ್ಯದಲ್ಲೂ ಗೆಲ್ಲುವ  ವಿಶ್ವಾಸದಲ್ಲಿದೆ.  ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸರಣಿಯಲ್ಲಿ ಸತತವಾಗಿ ಮೂರು ಶತಕ ಸಿಡಿಸಿದ್ದರೂ ಪಂದ್ಯ ಗೆಲ್ಲಲು ಸಾಧ್ಯವಾಗಿರಲಿಲ್ಲ.  ಇಂದು ಮತ್ತೆ  ಶತಕ ಬಾರಿಸಿದೆ ಅದು ಮುಂಬೈ ಕ್ರಿಕೆಟ್ ಅಭಿಮಾನಿಗಳಿಗೆ ಅಪರೂಪದ  ನೋಟವಾಗಲಿದೆ.

ಆದರೆ. ಭಾರತದ ಮಧ್ಯಮ ಕ್ರಮಾಂಕ  ಒತ್ತಡ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ.  ಕೊಹ್ಲಿ ಹೊರತುಪಡಿಸಿದರೆ. ಅಂಬಟ್ಟಿ ರಾಯುಡು, ರಿಷಬ್ ಪಂತ್,  ಮಹೇಂದ್ರ ಸಿಂಗ್  ಬ್ಯಾಟಿಂಗ್ ನಲ್ಲಿ ವಿಫಲತೆ ಎದುರಿಸುತ್ತಿದ್ದಾರೆ.  ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಹಾಗೂ ಶಿಖರ್ ಧವನ್ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಹಿಂದೆ ಬಿದಿದ್ದಾರೆ.

ಬ್ಯಾಟ್ಸ್ ಮನ್  ಶಾಯ್ ಹೋಪ್ ,ಆ್ಯಷ್ಲೆ ನರ್ಸ್,  ಶಿಮ್ರೊನ್ ಹೆಟ್ಮೆಯರ್ ಹಾಗೂ ಜೆ. ಹೊಲ್ಡರ್  ಅವರನ್ನೊಳಗೊಂಡ  ವೆಸ್ಟ್  ಇಂಡೀಸ್ ತಂಡ  ಭಾರತಕ್ಕೆ ಪ್ರಬಲ ಪೈಪೋಟಿ ನೀಡುತ್ತಿದೆ. ಆ ದೇಶದ ಬೌಲರ್ ಗಳು ಕೂಡಾ ಭಾರತದ ಬ್ಯಾಟ್ಸ್ ಮನ್ ಗಳನ್ನು 240 ರೊಳಗೆ ಕಟ್ಟಿ ಹಾಕಲು ಸಾಮೂಹಿಕವಾಗಿ ಪ್ರಯತ್ನಿಸುತ್ತಿದ್ದಾರೆ. 
ಪಂದ್ಯ ಆರಂಭ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com