ರವೀಂದ್ರ ಜಡೇಜಾಗೆ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡುವ ಹಂಬಲ !

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಟೆಸ್ಟ್ ಪಂದ್ಯದಿಂದ ಉತ್ತಮ ಆಟಗಾರನಾಗಿ ರೂಪುಗೊಳ್ಳಲು ಸಾಧ್ಯವಿಲ್ಲ, ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಆಡಲು ಬಯಸುವುದಾಗಿ ಸ್ಪಿನ್ನರ್ ರವೀಂದ್ರ ಜಡೇಜಾ ಹೇಳಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಪಡೆದಾಗ ರವೀಂದ್ರ ಜಡೇಜಾ ಸಂಭ್ರಮಿಸಿದ ಕ್ಷಣ
ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಪಡೆದಾಗ ರವೀಂದ್ರ ಜಡೇಜಾ ಸಂಭ್ರಮಿಸಿದ ಕ್ಷಣ

ಲಂಡನ್ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಟೆಸ್ಟ್ ಪಂದ್ಯದಿಂದ ಉತ್ತಮ ಆಟಗಾರನಾಗಿ ರೂಪುಗೊಳ್ಳಲು ಸಾಧ್ಯವಿಲ್ಲ, ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಆಡಲು ಬಯಸುವುದಾಗಿ ಸ್ಪಿನ್ನರ್ ರವೀಂದ್ರ ಜಡೇಜಾ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 57 ರನ್ ಗಳಿಗೆ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಇಡೀ ಸರಣಿಯಲ್ಲಿ ಇಷ್ಟು ಕಡಿಮೆ ಮೊತ್ತಕ್ಕೆ ಎರಡು ವಿಕೆಟ್ ಪಡೆದಿರುವುದರಲ್ಲಿ ರವೀಂದ್ರ ಜಡೇಜಾ ಅವರೇ ಮೊದಲಿಗರು.

ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡಬೇಕೆಂಬುದು ತಮ್ಮ ಹಂಬಲವಾಗಿದೆ. ಯಾವುದೇ  ಅವಕಾಶ ದೊರೆತಾಗ ಉತ್ತಮ ಪ್ರದರ್ಶನ ನೀಡುವುದೇ ತಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕೇವಲ ಒಂದು ಮಾದರಿಯಲ್ಲಿ ಆಡುವುದರಿಂದ ಅದು ಕಠಿಣ ಏನಿಸುತ್ತದೆ.  ಪಂದ್ಯಗಳ ನಡುವೆ ಸುಧೀರ್ಘ ವಿರಾಮ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀವು ಆಡಲು ಅಗತ್ಯವಿರುವ ಕಡಿಮೆ ಅನುಭವ ಇದಕ್ಕೆ ಕಾರಣ. ಆದ್ದರಿಂದ ಇಂತಹ ಪಂದ್ಯದ ಅವಕಾಶ ದೊರೆತಾಗ ತಮ್ಮ ಸಾಮರ್ಥ್ಯ ಸಾಬೀತುಪಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾಕ್ಕಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ಅವಕಾಶ ದೊರೆತಾಗ  ಅಲ್ ರೌಂಡರ್ ಆಗಿ ತನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ. ಕೆಟ್ಟ ಪಿಚ್ ನಲ್ಲಿ ಹೆಚ್ಚೆಚ್ಚು ಪಂದ್ಯಗಳನ್ನಾಡುವ ಮೂಲಕ ಹಳೆ ಫಾರ್ಮ್ ಗೆ ಮರಳಬಹುದಾಗಿದೆ. ಹೆಚ್ಚಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವುದರಿಂದ ಅದು ಸಾಧ್ಯವಾಗಲಿದ್ದು, ಎಲ್ಲಾ ಮಾದರಿಯ ಕ್ರಿಕೆಟ್ ಗೆ  ಮರಳುವುದಾಗಿ ರವೀಂದ್ರ ಜಡೇಜಾ ತಿಳಿಸಿದ್ದಾರೆ.

 ಮೊಹಮ್ಮದಿ ಶಮಿ ಹಾಗೂ ಬ್ರೂಮಾ, ಇಶಾಂತ್ ಎಲ್ಲರೂ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಇಂಗ್ಲೆಂಡ್ ಪಿಚ್ ಬ್ಯಾಟ್ಸ್ ಮನ್ ಸ್ನೇಹಿಯಾಗಿದ್ದರೂ ಅಂತಿಮ ಸೆಶನ್ಸ್ ನಲ್ಲಿ  65ಕ್ಕೆ ಆರು ವಿಕೆಟ್ ಪಡೆಯಲಾಗಿದೆ. ಮತ್ತೆ ಟೀಂ ಇಂಡಿಯಾ ಬೌಲರ್ ಗಳ ಲಯಕ್ಕೆ ಮರಳಿದ್ದು, ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿದ್ದಾರೆ ಎಂದು ರವೀಂದ್ರ ಜಡೇಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com