ರವೀಂದ್ರ ಜಡೇಜಾ ಅಸಾಮಾನ್ಯ ಆಟಗಾರ, ಅವರು ಮೊದಲ ನಾಲ್ಕು ಮ್ಯಾಚ್ ಆಡದಿದ್ದು ನಮ್ಮ ಪುಣ್ಯ!

ರವೀಂದ್ರ ಜಡೇಜಾ ಅಸಾಮಾನ್ಯ ಕ್ರಿಕೆಟ್ ಆಟಗಾರ . ಮೊದಲ ನಾಲ್ಕು ಮ್ಯಾಚ್ ಅವರು ಆಡದಿದ್ದು ನಮ್ಮ ಪುಣ್ಯ! ಎಂದು ಇಂಗ್ಲೆಂಡ್​ ತಂಡದ ಸಹಾಯಕ ಕೋಚ್ ಪೌಲ್​ ಫಾರ್​ಬ್ರೇಸ್​​​ ಹೊಗಳಿದ್ದಾರೆ.
ರವೀಂದ್ರ ಜಡೇಜಾ ಆಟದ ವೈಖರಿ
ರವೀಂದ್ರ ಜಡೇಜಾ ಆಟದ ವೈಖರಿ

ಲಂಡನ್ : ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಆಟಕ್ಕೆ ಭಾರತೀಯರು ಮಾತ್ರವಲ್ಲ, ಇಂಗ್ಲೆಂಡ್ ತಂಡದವರೂ ಕೂಡಾ ಪಿಧಾ ಆಗಿದ್ದಾರೆ.

ರವೀಂದ್ರ ಜಡೇಜಾ ಅಸಾಮಾನ್ಯ ಕ್ರಿಕೆಟ್ ಆಟಗಾರ . ಮೊದಲ ನಾಲ್ಕು ಮ್ಯಾಚ್  ಅವರು  ಆಡದಿದ್ದು ನಮ್ಮ ಪುಣ್ಯ!  ಎಂದು ಇಂಗ್ಲೆಂಡ್​ ತಂಡದ ಸಹಾಯಕ ಕೋಚ್ ಪೌಲ್​ ಫಾರ್​ಬ್ರೇಸ್​​​ ಹೊಗಳಿದ್ದಾರೆ.

 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರವೀಂದ್ರ ಜಡೇಜಾ ತನ್ನ ಒಂಬತ್ತನೇ ಟೆಸ್ಟ್ ನಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು  160-6 ರಿಂದ 292ಕ್ಕೆ ಕೊಂಡೊಯ್ದು ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಕಾಪಾಡಿದ್ದರು.

ಸಂಕಷ್ಟದ ಸಂದರ್ಭದಲ್ಲಿ   ಕೊನೆಯ ಪಾರ್ಟನರ್ ಶಿಫ್ ನಲ್ಲಿ ರವೀಂದ್ರ ಜಡೇಜಾ  ಉತ್ತಮವಾಗಿ ಆಡಿದರು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವೂದರಲ್ಲಿಯೂ  ಅವರೊಬ್ಬ ಅಸಾಮಾನ್ಯ , ಅಪಾಯಕಾರಿ ಆಟಗಾರ.  ಕೊನೆಯ ಪಂದ್ಯದಲ್ಲಿ ಅವರ ಜವಾಬ್ದಾರಿಯುತ ಆಟ ತಮ್ಮಗೆ ಸಂತಸವನ್ನುಂಟುಮಾಡಿತು ಎಂದು ಫಾರ್​ಬ್ರೇಸ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟಾರ್ ಕುಕ್  ಅವರ ವಿದಾಯದ  ಶತಕ ನೋಡಲು ಇಡೀ ಜಗತ್ತೇ ಕಾಯುತ್ತಿದೆ.  ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಅದು ಸಾಧ್ಯವಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ  ಫಾರ್​ಬ್ರೇಸ್   ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com