ಸೆ.15ರಿಂದ ಶುರುವಾಗಲಿದೆ ಏಷ್ಯಾಕಪ್ ಕ್ರಿಕೆಟ್ ಜ್ವರ; ರೋಚಕ ಘಟನೆಗಳ ಪಟ್ಟಿ ಇಲ್ಲಿದೆ!

ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗುತ್ತಿದ್ದು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ನಾವು ಏನು ಕಮ್ಮಿಯಿಲ್ಲ ಅಂತ ಶ್ರೀಲಂಕಾ ಮತ್ತು ಬಾಂಗ್ಲಾ ಸಹ ಕ್ರಿಕೆಟ್ ಯುದ್ಧಕ್ಕೆ...
ಟೀಂ ಇಂಡಿಯಾ, ಪಾಕಿಸ್ತಾನ
ಟೀಂ ಇಂಡಿಯಾ, ಪಾಕಿಸ್ತಾನ
ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗುತ್ತಿದ್ದು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ನಾವು ಏನು ಕಮ್ಮಿಯಿಲ್ಲ ಅಂತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಹ ಕ್ರಿಕೆಟ್ ಯುದ್ಧಕ್ಕೆ ಸೆಟೆದು ನಿಂತಿವೆ. 
ಏಷ್ಯಾ ಕಪ್ ಪಂದ್ಯಾವಳಿಯ ರೋಚಕ ಇತಿಹಾಸದ ಕೆಲ ಮಹತ್ವದ ಘಟನೆಗಳ ಪಟ್ಟಿ ಇಲ್ಲಿದೆ. 
* 1984ರಲ್ಲಿ ಏಷ್ಯಾಕಪ್ ನ ಮೊದಲ ಆವೃತ್ತಿ ಆರಂಭವಾಗಿದ್ದು ಶಾರ್ಜಾದಲ್ಲಿ ನಡೆದ ಪ್ರಥಮ ಕೂಟದಲ್ಲಿ ಸುನೀಲ್ ಗವಾಸ್ಕರ್ ನಾಯಕತ್ವದ ಟೀಂ ಇಂಡಿಯಾ ಚೊಚ್ಚಲ ಏಷ್ಯಾಕಪ್ ಟ್ರೋಫಿಯನ್ನು ಗೆದ್ದು ಬೀಗಿತ್ತು. 
* 1986ರಲ್ಲಿ ಎರಡನೇ ಆವೃತ್ತಿಯ ಏಷ್ಯಾಕಪ್ ಪಂದ್ಯಾವಳಿಯ ಶ್ರೀಲಂಕಾದಲ್ಲಿ ನಡೆದಿತ್ತು. ಶ್ರೀಲಂಕಾ ವಿರುದ್ಧದ ರಾಜತಾಂತ್ರಿಕ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಯಿತು. 
* 1986ರಲ್ಲಿ ಏಷ್ಯಾಕಪ್ ಗೆ ಅರ್ಹತೆ ಪಡೆದಿದ್ದ ಬಾಂಗ್ಲಾದೇಶ 1988ರ ಏಷ್ಯಾಕಪ್ ಗೆ ಆತಿಥ್ಯ ವಹಿಸಿತ್ತು. ಈ ಪಂದ್ಯಾವಳಿಯಲ್ಲಿ ಭಾರತ ಶ್ರೀಲಂಕಾ ತಂಡವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. 
* 1990ರ ಆವೃತ್ತಿಯ ಏಷ್ಯಾಕಪ್ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿತ್ತು. ರಾಜಕೀಯ ಕಾರಣಗಳಿಂದ ಪಾಕಿಸ್ತಾನ ಈ ಕೂಟದಲ್ಲಿ ಭಾಗವಹಿಸಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಟೀಂ ಇಂಡಿಯಾ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 
* 1998ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಅರ್ಷದ್ ಅಯೂಬ್ ಮೊದಲ 5 ವಿಕೆಟ್ ಗೊಂಚಲು ಪಡೆದು ದಾಖಲೆ ಬರೆದರು. ಢಾಕಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಷದ್ 21 ರನ್ ಗಳಿಗೆ 5 ವಿಕೆಟ್ ಪಡೆದು ಏಷ್ಯಾಕಪ್ ಇತಿಹಾಸದಲ್ಲಿ 5 ವಿಕೆಟ್ ಗೊಂಚಲು ಪಡೆದ ಬೌಲರ್ ಆಗಿ ಹೊರಹೊಮ್ಮಿದರು. 
* 2000ರ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಅಂತಿಮ ಘಟ್ಟ ತಲುಪುವಲ್ಲಿ ವಿಫಲವಾಯಿತು. ಬಾಂಗ್ಲಾದೇಶದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. 
* 2012ರ ಏಷ್ಯಾಕಪ್ ಭಾರತ ಗೆಲ್ಲದಿದ್ದರು. ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಅಮೋಘ ಜಯ ದಾಖಲಿಸಿತ್ತು. 330 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿಯ ಭರ್ಜರಿ 183 ನರ್ ಗಳ ಸಹಾಯಿಂದ ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿತು. 
* 2016ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಪಂದ್ಯಾವಳಿ ಟಿ20 ರೂಪದಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಮಣಿಸಿ ಕಪ್ ಗೆದ್ದುಕೊಂಡಿತ್ತು. 
* ಇದುವರೆಗೂ ಒಟ್ಟು 13 ಬಾರಿ ಏಷ್ಯಾಕಪ್ ಟೂರ್ನಿ ನಡೆದಿದ್ದು ಇದರಲ್ಲಿ ಟೀಂ ಇಂಡಿಯಾ ಅತೀ ಹೆಚ್ಚು ಸಲ ಚಾಂಪಿಯನ್ ಆದ ತಂಡವಾಗಿದೆ. ಟೀಂ ಇಂಡಿಯಾ 6 ಬಾರಿ ಚಾಂಪಿಯನ್ ಆದರೆ, ಶ್ರೀಲಂಕಾ 5, ಇನ್ನು ಪಾಕಿಸ್ತಾನ ಎರಡು ಬಾರಿ ಚಾಂಪಿಯನ್ ಆಗಿದೆ. 
* 2018ರ ಏಷ್ಯಾಕಪ್ ಪಂದ್ಯಾವಳಿ ದುಬೈನಲ್ಲಿ ನಡೆಯುತ್ತಿದ್ದು ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಕಾಂಗ್ ದೇಶಗಳು ಟೂರ್ನಿಯಲ್ಲಿ ಪಾಲ್ಗೋಳುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com