ಏಷ್ಯಾಕಪ್ 2018: ಹಾರ್ದಿಕ್ ಪಾಂಡ್ಯ, ಆಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್ ಗೆ ಗಾಯ: ಭಾರತಕ್ಕೆ ಆತಂಕ!

ಏಷ್ಯಾಕಲ್ 2018 ರ ಟೂರ್ನಿಯಲ್ಲಿ ಹಾಂಕ್ ಕಾಂಗ್, ಪಾಕಿಸ್ತಾನದ ವಿರುದ್ಧ ಗೆದ್ದು, ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಆಟಗಾರರು ಗಾಯಗೊಳ್ಳುತ್ತಿರುವ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
Updated on: 
ಏಷ್ಯಾಕಪ್ 2018 ರ ಟೂರ್ನಿಯಲ್ಲಿ ಹಾಂಕ್ ಕಾಂಗ್, ಪಾಕಿಸ್ತಾನದ ವಿರುದ್ಧ ಗೆದ್ದು, ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಆಟಗಾರರು ಗಾಯಗೊಳ್ಳುತ್ತಿರುವ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. 
ಭಾರತದ ಪ್ರಮುಖ ಆಟಗಾರರಾದ ಹಾರ್ದಿಕ್ ಪಾಂಡ್ಯ ಈಗಾಗಲೇ ಗಾಯಗೊಂಡಿದ್ದು, ಸ್ಪಿನ್ನರ್ ಆಕ್ಸರ್ ಪಟೇಲ್, ವೇಗಿ ಶಾರ್ದೂಲ್ ಠಾಕೂರ್ ಸಹ ಗಾಯದ ಸಮಸ್ಯೆಯಿಂದಾಗಿ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ. ಈ ಬೆಳವಣಿಗೆ ಭಾರತದ ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ತಲೆ ನೋವಾಗಿ ಪರಿಣಮಿಸಿದೆ. 
ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಣ್ಣ ಗಾಯಕ್ಕೊಳಗಾಗಿದ್ದು, ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ. ಪಾಂಡ್ಯ ಬದಲಿಗೆ ದೀಪಕ್ ಚಹಾರ್ ಅವರನ್ನು ತಂಡಕ್ಕೆ ಕರೆತರಲಾಗಿದ್ದು, ಆಕ್ಸರ್ ಪಟೇಲ್ ಬದಲು ರವೀಂದ್ರ ಜಡೇಜಾ ಶಾರ್ದೂಲ್ ಪಟೇಲ್ ಪರವಾಗಿ ಸಿದ್ಧಾರ್ಥ್ ಕೌಲ್ ಆಡಲಿದ್ದಾರೆ. ಸೆ.20 ರಂದು ಚಹಾರ್, ಜಡೇಜಾ, ಕೌಲ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com