ವಿಜಯ್ ಹಜಾರೆ ಟ್ರೋಫಿ: 2 ದಶಕಗಳ ಹಿಂದಿನ ವಿಶ್ವದಾಖಲೆ ಸರಿಗಟ್ಟಿದ ಸ್ಪಿನ್ನರ್ ಶಹಬಾಜ್ ನದೀಮ್
ವಿಜಯ್ ಹಜಾರೆ ಟ್ರೋಫಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಮ್, ಲಿಸ್ಟ್ ಎ ಕ್ರಿಕೆಟ್ ನಲ್ಲಿ 2 ದಶಕಗಳ ಹಿಂದಿನ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

8/10 ವಿಕೆಟ್ ಗಳನ್ನು ಪಡೆಯುವ ಮೂಲಕ ನದೀಮ್ ಜಾರ್ಖಂಡ್ ತಂಡ 7 ವಿಕೆಟ್ ಗಳ ಅಂತರದಿಂದ ಜಯಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 28.3 ಓವರ್ ಗಳಲ್ಲಿ ರಾಜಸ್ಥಾನ ತಂಡವನ್ನು 73 ರನ್ ಗಳಿಗೆ ಔಟ್ ಮಾಡಿದ್ದ ಜಾರ್ಖಂಡ್ ತಂಡದಲ್ಲಿ ನದೀಪ್ ಬೆಸ್ಟ್ ಬೌಲರ್ ಎನಿಸಿದ್ದಾರೆ.
ಈ ಹಿಂದಿನ ದಾಖಲೆಯೂ ಸಹ ಭಾರತೀಯ ಕ್ರಿಕೆಟಿಗನದ್ದೇ ಆಗಿದ್ದು, 1997-98 ರ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಎಡಗೈ ಸ್ಪಿನ್ನರ್ ರಾಹುಲ್ ಸಂಘ್ವಿ 8/15 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು ನಂತರ 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು.
ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆಯನ್ನೂ ನದೀಮ್ ಮಾಡಿದ್ದಾರೆ. ನನ್ನ ಪ್ರದರ್ಶನ ಹಾಗೂ ಹ್ಯಾಟ್ರಿಕ್ ಸಾಧನೆಯ ಬಗ್ಗೆ ಸಂತಸವಿದೆ ಎಂದು ಶಹಬಾಜ್ ನದೀಮ್ ಹೇಳಿದ್ದಾರೆ.