ಯಾರೊಬ್ಬರಿಗೂ ನನ್ನ 'ಸಮರ್ಥತೆ' ಸಾಬೀತುಪಡಿಸಿಸುವ ಅಗತ್ಯವಿಲ್ಲ: ಜಡೇಜಾ

ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್...
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
Updated on
ದುಬೈ: ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಯಾರೊಬ್ಬರಿಗೂ ನಾನು ಸಮರ್ಥ ಎಂದು ಸಾಬೀತುಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಹಲವು ದಿನಗಳ ಬಳಿಕ ತಂಡಕ್ಕೆ ಮರಳಿರುವ ರವೀಂದ್ರ ಜಡೇಜಾ ಅವರು ಆಡಿದ ಪಂದ್ಯದಲ್ಲೇ 4 ವಿಕೆಟ್ ಗಳನ್ನು ಪಡೆದು ಎದುರಾಳಿ ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದ್ದರು. ಇದರೊಂದಿಗೆ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಲು ನೆರವಾಗಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು. 
ನಾನು 480 ದಿನಗಳ ಬಳಿಕ ಟೀಂ ಇಂಡಿಯಾ ಏಕದಿನ ತಂಡಕ್ಕೆ ಮರಳಿದ್ದೇನೆ. ಇದಕ್ಕೂ ಮುನ್ನ ನಾನು ಇಷ್ಟು ದಿನ ತಂಡದಿಂದ ದೂರ ಉಳಿದಿರಲಿಲ್ಲ. ಇನ್ನು ಕಮ್ ಬ್ಯಾಕ್ ಪಂದ್ಯದಲ್ಲೇ ಉತ್ತಮವಾಗಿ ಆಡಿದ್ದೇನೆ ಎಂದರು. 
ಪ್ರತಿ ಬಾರಿ ನನ್ನನ್ನು ನಾನು ಸಮರ್ಥ ಎಂದು ಸಾಬೀತುಪಡಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
2019ರ ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ಕೆಲ ತಿಂಗಳುಗಳು ಬಾಕಿ ಇರುವಾಗ ರವೀಂದ್ರ ಜಡೇಜಾ ಅವರು ಉತ್ತಮ ಪ್ರದರ್ಶನ ನೀಡುತ್ತಿರುವುದು ಆಯ್ಕೆಗಾರರು ಇತ್ತ ನೋಡುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com