ದುಬೈ: ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಪೋರ್ ನ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ದುಬೈನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಉಭಯ ತಂಡಗಳಿಗೂ ಪ್ರತಿಷ್ಠೆಯ ಪಂದ್ಯವಾಗಿರುವುದರಿಂದ ಗೆಲ್ಲಲು ನಾನಾ ರಣತಂತ್ರಗಳನ್ನು ಹೆಣೆದಿವೆ.
ಪಾಕಿಸ್ತಾನ ತಂಡದಲ್ಲಿ ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಾಮ್, ಶೋಯಬ್ ಮಲಿಕ್, ಸರ್ಫರಾಜ್ ಅಹಮ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಬದ್ ಖಾನ್, ಮೊಹಮ್ಮದ್ ಅಮೀರ್, ಹಸನ್ ಅಲಿ, ಶಾಹೇನ್ ಶಾ ಆಫ್ರಿದಿ ಆಡಲಿದ್ದಾರೆ.
ಟೀಂ ಇಂಡಿಯಾ ತಂಡದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಕೇದಾರ್ ಜಾದವ್, ಎಂಎಸ್ ಧೋನಿ, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್ ಮತ್ತು ಜಸ್ ಪ್ರೀತ್ ಬುಮ್ರಾ ಆಡಲಿದ್ದಾರೆ.