ದುಬೈ :ಭಾರತ- ಪಾಕಿಸ್ತಾನ ನಡುವಿನ ಪಂದ್ಯಗಳನ್ನು ರಾಜಕಾರಣದ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಕ್ರಿಕೆಟ್ ವಿಷಯಗಳಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶಿಸಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ.
ಅಲ್ಲದೇ, ಭಾರತ- ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಮಾತುಕತೆಗಳು ಮುಂದುವರೆಯಲಿವೆ ಎಂದು ಮಣಿ ತಿಳಿಸಿದ್ದು, ಕ್ರಿಕೆಟ್ ನಲ್ಲಿ ರಾಜಕಾರಣ ಹಾಗೂ ರಾಜಕಾರಣಿಗಳು ಮಧ್ಯಪ್ರವೇಶಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರಿಕೆಟ್ ಪಂದ್ಯಗಳು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಗಳಿಗಿಂತಲೂ ಮಹತ್ವದಾಗಿದ್ದು, ಉಭಯ ದೇಶಗಳ ನಡುವಿನ ಕ್ರಿಕೆಟ್ ಮಂಡಳಿಗಳ ಸಂಬಂಧಗಳು ಪ್ರಗತಿಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಆಡುವಾಗ ಸುಮಾರು 100 ಬಿಲಿಯನ್ ಕ್ರಿಕೆಟ್ ಪ್ರೇಮಿಗಳು ವಿಶ್ವದಾದ್ಯಂತ ವೀಕ್ಷಿಸುತ್ತಾರೆ. ಆದರೆ. ಆ ಹಂತದಲ್ಲಿ ರಾಜಕಾರಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ,ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಜೊತೆಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ದಿನಗಳಲ್ಲಿ ಏನೆಲ್ಲಾ ಸಂಭವಿಸಿದೆ ಎಂಬುದನ್ನ ನಾವೆಲ್ಲರೂ ಅರ್ಥ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳ ಬಗ್ಗೆ ಎದುರು ನೋಡುತ್ತಿರುವುದಾಗಿ ಎಹಸಾನ್ ಮಣಿ ಹೇಳಿದರು.
Advertisement