ಅಫ್ಘಾನಿಸ್ಥಾನ ವಿರುದ್ಧದ ಪಂದ್ಯ: ಭಾರತದ ಗೆಲುವಿಗೆ ಮುಳುವಾದ ಅಂಪೈರ್ ವೈಫಲ್ಯದ ಬಗ್ಗೆ ಧೋನಿ ಹೇಳಿದ್ದು?

ಏಷ್ಯಾಕಪ್ 2018 ರ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಮುಳುವಾಗಿದ್ದು, ಅಂಪೈರ್ ನ ತಪ್ಪು ನಿರ್ಧಾರಗಳೇ ಕಾರಣವಾಗಿದ್ದು, ಈ ಬಗ್ಗೆ ಎಂಎಸ್ ಧೋನಿ ಮೌನ ಮುರಿದಿದ್ದಾರೆ.
ಅಫ್ಘಾನಿಸ್ಥಾನ ವಿರುದ್ಧದ ಪಂದ್ಯ: ಭಾರತದ ಗೆಲುವಿಗೆ ಮುಳುವಾದ ಅಂಪೈರ್ ವೈಫಲ್ಯದ ಬಗ್ಗೆ ಧೋನಿ ಹೇಳಿದ್ದು?
ದುಬೈ: ಏಷ್ಯಾಕಪ್ 2018 ರ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಮುಳುವಾಗಿದ್ದು, ಅಂಪೈರ್ ನ ತಪ್ಪು ನಿರ್ಧಾರಗಳೇ ಕಾರಣವಾಗಿದ್ದು, ಈ ಬಗ್ಗೆ ಎಂಎಸ್ ಧೋನಿ ಮೌನ ಮುರಿದಿದ್ದಾರೆ. 
ಅಂಪೈರ್ ಗಳ ತಪ್ಪು ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಸ್ ಧೋನಿ "ನನಗೆ ದಂಡ ಪಾವತಿಸುವುದು ಬೇಕಿಲ್ಲ" ಎಂದು ಹೇಳುವ ಮೂಲಕ ಅಂಪೈರ್ ಗಳ ತಪ್ಪು ನಿರ್ಧಾರದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಭಾರತದ ಇನ್ನಿಂಗ್ಸ್ ನ 26ನೇ ಓವರ್ ನಲ್ಲಿ ಧೋನಿ ಜಾವೆದ್ ಅಹ್ಮಾದಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು ಔಟ್ ಆದರು. ಆದರೆ ಟಿವಿ ರಿಪ್ಲೆ ನಲ್ಲಿ ಧೋನಿ ಔಟ್ ಆಗಿರಲಿಲ್ಲ. ಅಹ್ಮಾದಿ ಎಸೆದ ಚೆಂಡು ಲೆಗ್ ಸ್ಟಂಪ್ ನಿಂದ ಆಚೆಗೆ ಹೋಗಿತ್ತು, ಈ ವಿಚಾರ ಧೋನಿಗೆ ತಿಳಿದಿತ್ತಾದರೂ, ರಿವ್ಯೂ ಅವಕಾಶ ಇಲ್ಲವಾಗಿದ್ದರಿಂದ ಧೋನಿಗೆ ರಿವ್ಯೂ ಪಡೆಯದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅಂತೆಯೇ 44 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕಾರ್ತಿಕ್ ಕೂಡ ನಬಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಔಟ್ ಆಗಿದ್ದರು. ಆದರೆ ಇದೂ ಕೂಡ ಔಟ್ ಆಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com