ಟೀಂ ಇಂಡಿಯಾ ಈ 5 ತಪ್ಪುಗಳನ್ನು ತಿದ್ದಿಕೊಂಡರೆ ಈ ಬಾರಿ ಏಷ್ಯಾಕಪ್ ನಮ್ದೇ!

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಫೈನಲ್ ಹಂತಕ್ಕೆ ತಲುಪಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಫೈನಲ್ ಹಂತಕ್ಕೆ ತಲುಪಿದೆ. 
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಚಾಂಪಿಯನ್ ಪಟ್ಟಕ್ಕಾಗಿ ಹಣಾಹಣಿ ನಡೆಸಲಿವೆ. ಇನ್ನು ಟೀಂ ಇಂಡಿಯಾ ಈ ಐದು ತಪ್ಪುಗಳನ್ನು ತಿದ್ದಿಕೊಂಡರೆ ಏಷ್ಯಾಕಪ್ ನಮ್ದೆ ಆಗಲಿದೆ. 
ಏಷ್ಯಾಕಪ್ ನಲ್ಲಿ ಒಮ್ಮೆಯೂ ಸೋಲಿನ ರುಚಿ ನೋಡದೇ ಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ ಕೆಲವೊಂದು ತಪ್ಪುಗಳನ್ನು ಮಾಡುತ್ತಲೇ ಬಂದಿದೆ. ಆದರೆ ಈ ಪ್ರಮುಖ 5 ತಪ್ಪುಗಳು ಮತ್ತೆ ಮಾಡಿದರೇ ಟೀಂ ಇಂಡಿಯಾ ಕಪ್ ಎತ್ತಿಹಿಡಿಯುವುದು ಕಷ್ಟವಾಗಬಹುದು. 
ಏಷ್ಯಾಕಪ್ ಕಪ್ ಇತಿಹಾಸದಲ್ಲಿ ಭಾರತ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ 7ನೇ ಬಾರಿಗೆ ಏಷ್ಯಾಕಪ್ ಜಯಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. 
* ಎದುರಾಳಿ ತಂಡವನ್ನು ಲಘುವಾಗಿ ಕಾಣಬಾರದು. 
* ಟೀಂ ಇಂಡಿಯಾ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬೇಕು. 
* ಟೀಂ ಇಂಡಿಯಾ ಡಿಆರ್ಎಸ್ ಬಳಸುವುದರಲ್ಲಿ ಎಡವುತ್ತಿದ್ದು ಸರಿಯಾದ ಸಂದರ್ಭದಲ್ಲಿ ಡಿಆರ್ಎಸ್ ಬಳಸಿಕೊಳ್ಳಬೇಕು.
* ಅತ್ಯುತ್ತಮ ಪ್ರದರ್ಶನ ನೀಡುವ ಬೌಲರ್ ಗಳನ್ನು ಬದಲಿಸಬಾರದು.
* ಒಂದು ವಿಕೆಟ್ ಬಿದ್ದ ನಂತರ ಬ್ಯಾಟಿಂಗ್ ಗೆ ಬರುವ ಆಟಗಾರರು ಜಾಗರೂಕತೆಯಿಂದ ಆಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com