ಭಾರತೀಯ ಅಭಿಮಾನಿ
ಕ್ರಿಕೆಟ್
ಗೆಲ್ಲುವ ಪಂದ್ಯ ಟೈ, ಬಿಕ್ಕಳಿಸಿ ಅತ್ತ ಬಾಲಕ, ಸಮಾಧಾನ ಪಡಿಸಿದ ಭುವಿ, ವಿಡಿಯೋ ವೈರಲ್!
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಹಾಗೂ ಆಫ್ಘಾನಿಸ್ತಾನ್ ವಿರುದ್ಧದ ಪಂದ್ಯದ ಟೈನಲ್ಲಿ ಅಂತ್ಯವಾಗಿದ್ದು ಪಂದ್ಯ ವೀಕ್ಷಣೆಗೆ ಬಂದ ಭಾರತದ ಪುಟ್ಟ...
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಹಾಗೂ ಆಫ್ಘಾನಿಸ್ತಾನ್ ವಿರುದ್ಧದ ಪಂದ್ಯದ ಟೈನಲ್ಲಿ ಅಂತ್ಯವಾಗಿದ್ದು ಪಂದ್ಯ ವೀಕ್ಷಣೆಗೆ ಬಂದ ಭಾರತದ ಪುಟ್ಟ ಅಭಿಮಾನಿಯೊಬ್ಬ ಕಣ್ಣೀರಿಟ್ಟ ಘಟನೆ ನಡೆದಿದೆ.
ಕ್ರೀಡೆಗಳು ಕೇವಲ ಆಟಕ್ಕೆ, ಮನರಂಜನೆಗೆ ಮಾತ್ರ ಸೀಮಿತವಾಗಿರದೇ, ಪಂದ್ಯದಲ್ಲಿ ಬರವ ಸೋಲು-ಗೆಲುವಿನ ಫಲಿತಾಂಶ ಆಡುವವರಿಗಿಂತ ನೋಡುಗರಲ್ಲಿ ಹೆಚ್ಚು ಭಾವಾನಾತ್ಮಕ ಪರಿಣಾಮ ಬೀರುತ್ತದೆ ಎಂಬುವುದಕ್ಕೆ ಈ ಪಂದ್ಯ ಸಾಕ್ಷಿಯಾಗಿದ್ದು ಪಂದ್ಯ ಟೈ ಆಗುತ್ತಿದ್ದಂತೆ ಪುಟ್ಟ ಸರ್ದಾರ್ ಜೀ ಕಣ್ಣೀರು ಹಾಕಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಅಮರ್ ಪ್ರೀತ್ ಸಿಂಗ್ ಎಂಬುವವರ ಮಗ ತನ್ನ ತಂದೆಯನ್ನು ಅಪ್ಪಿ, ಭಾರತ ಗೆಲ್ಲುವ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದ್ದನ್ನು ಸಹಿಸದೇ ಕಣ್ಣೀರಿಟ್ಟಿದ್ದಾನೆ. ಈ ಸಂದರ್ಭದಲ್ಲಿ ವಿಶ್ರಾಂತಿಯಲ್ಲಿ ಭುವನೇಶ್ವರ್ ಕುಮಾರ್ ಬಾಲಕನನ್ನು ತಮ್ಮ ಬಳಿ ಕರೆಯಿಸಿಕೊಂಡು ಫೈನಲ್ ಪಂದ್ಯಕ್ಕೆ ಬಾ ನಾವೇ ಗೆಲ್ಲುತ್ತೇವೆ ಎಂದು ಸಮಾಧಾನ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಆಫ್ಘಾನಿಸ್ತಾನ 252 ರನ್ ಪೇರಿಸಿ ಟೀಂ ಇಂಡಿಯಾಗೆ 253 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 49.5 ಓವರ್ ನಲ್ಲಿ 10 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದು ಪಂದ್ಯ ಟೈ ಆಗಿತ್ತು.
This little kid crying after the match gets tied has to be the cutest moment of the day


