ಸತತ ಮೂರನೇ ಬಾರಿ 'ವಿಶ್ವದ ಮುಂಚೂಣಿ ಕ್ರಿಕೆಟಿಗ' ಗೌರವಕ್ಕೆ ಭಾಜನರಾದ ಕೊಹ್ಲಿ
ಕ್ರಿಕೆಟ್
ಸತತ ಮೂರನೇ ಬಾರಿ 'ವಿಶ್ವದ ಮುಂಚೂಣಿ ಕ್ರಿಕೆಟಿಗ' ಗೌರವಕ್ಕೆ ಭಾಜನರಾದ ಕೊಹ್ಲಿ
ಕಳೆದ 2018ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು, “ವಿಸ್ಡನ್ ಕ್ರಿಕೆಟರ್ಸ್” ನೀಡುವ “ ವಿಶ್ವದ ಮುಂಚೂಣಿ ಕ್ರಿಕೆಟಿಗ” ಎಂಬ ಗೌರವಕ್ಕೆ ಸತತ
ದುಬೈ: ಕಳೆದ 2018ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು, “ವಿಸ್ಡನ್ ಕ್ರಿಕೆಟರ್ಸ್” ನೀಡುವ “ ವಿಶ್ವದ ಮುಂಚೂಣಿ ಕ್ರಿಕೆಟಿಗ” ಎಂಬ ಗೌರವಕ್ಕೆ ಸತತ ಮೂರನೇ ಬಾರಿ ಭಾಜನರಾಗಿದ್ದಾರೆ.
ವಿರಾಟ್ ಕೊಹ್ಲಿ 2018ರ ಸಾಲಿನಲ್ಲಿ ಟೆಸ್ಟ್, ಏಕದಿನ ಹಾಗೂ ಟಿ-20 ಮೂರು ವಿಭಾಗದಲ್ಲಿ ಒಟ್ಟು 2,735 ರನ್ ದಾಖಲಿಸಿದ್ದಾರೆ. ಹಾಗಾಗಿ, ಅವರು “ವಿಶ್ವದ ಮುಂಚೂಣಿ ಕ್ರಿಕೆಟಿಗ” ಗೌರವಕ್ಕೆ ಸತತ ಮೂರನೇ ಭಾಜನರಾದರು. ಜತೆಗೆ, “ವಿಸ್ಡನ್ ವರ್ಷದ ಐವರು ಮುಂಚೂಣಿ ಕ್ರಿಕೆಟಿಗರು” ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಕೊಹ್ಲಿ ಜತೆಗೆ ಟಾಮಿ ಬಿಮೌಂಟ್, ರೋರಿ ಬರ್ನ್ಸ್, ಜೋಸ್ ಬಟ್ಲರ್ ಹಾಗೂ ಸ್ಯಾಮ್ ಕರ್ರನ್ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಭಾರತ ಮಹಿಳಾ ತಂಡದ ಬ್ಯಾಟ್ಸ್ ವುಮೆನ್ ಸ್ಮೃತಿ ಮಂಧಾನ ಕೂಡ “ವಿಶ್ವದ ಮುಂಚೂಣಿ ಕ್ರಿಕೆಟ್ ಆಟಗಾರ್ತಿ” ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. 2018 ಸಾಲಿನಲ್ಲಿ ಅಂತಾರಾಷ್ಟ್ರೀಯ ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರು ಸತತ ಎರಡನೇ ಬಾರಿ “ವರ್ಷದ ಟಿ-20 ಮುಂಚೂಣಿ ಕ್ರಿಕೆಟಿಗ” ಗೌರವಕ್ಕೆ ಪಾತ್ರರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ