ಚೆನ್ನೈಗೆ ಅಂತಿಮ ಓವರ್ ನಲ್ಲಿ ಗೆಲ್ಲಲು 18 ರನ್ ಗಳ ಅಗತ್ಯವಿತ್ತು. ಆ ವೇಳೆ ಜಡ್ಡು ಮೊದಲ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದರು. ಆದರೆ ಆದರೆ ಇದೇ ಓವರ್ ನ ಮೂರನೇ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್ ಆಗುವುದರೊಡನೆ ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದರು. ನಾಲ್ಕನೇ ಎಸೆತ ರಾಜಸ್ಥಾನ ಪರ ಸ್ಟ್ರೋಕ್ಸ್ ಎಸೆದಿದ್ದ ಬಾಲ್ ಬ್ಯಾಟ್ ಗೆ ತಾಕದೆ ಹಿಂದೆ ಸರಿದು ಹೋಗಿತ್ತು. ಆದರೆ ಆ ಭಾಗದಲ್ಲಿ ಯಾವ ಫೀಲ್ಡರ್ ಇಲ್ಲದ ಕಾರಣ ಚೆನ್ನೈನ ಸ್ಯಾಂತನರ್ ಹಾಗೂ ಜಡೇಜಾ ಸೇರಿ ಎರಡು ರನ್ ಗಳಿಸಿದ್ದರು. ಆಗ ಅಂಪೇರ್ ಉಲ್ಲಾಸ್ ಗಂದೆ "ನೋಬಾಲ್" ಸೂಚನೆ ನೀಡಿದ್ದಾರೆ.ಇನ್ನೊಬ್ಬ ಅಂಪೇರ್ ಆಕ್ಸನ್ ಪೋರ್ಡ್ "ನೋಬಾಲ್" ನೀಡಲು ಒಪ್ಪಲಿಲ್ಲ. ಇದೇ ವೇಳೆ ಜಡೇಜಾ ನೋಬಾಲ್ ನಿಡುವಂತೆ ಅಂಪೇರ್ ಗೆ ಮನವಿ ಮಾಡಿದರೂ ಅಂಪೇರ್ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಆಗ ಧೋನಿ ಮೈದಾನಕ್ಕೆ ಆಗಮಿಸಿ ಅಂಪೇರ್ ಜತೆ ಮಾತಿಗಿಳಿದಿದ್ದಾರೆ. ಆದರೂ ಅಂಪೇರ್ ಮಾತ್ರ "ನೋಬಾಲ್" ನೀಡಲು ಒಪ್ಪಲೇ ಇಲ್ಲ.