ಅಂಬಟಿ ರಾಯುಡುಗೆ ಆದಂತೆ ನಿಮಗೂ ಆಗುತ್ತದೆ ಎಂದ ಅಭಿಮಾನಿಗೆ ಮನೋಜ್ ಹೇಳಿದ್ದೇನು?

ಅಂಬಟಿ ರಾಯುಡು ನಿರ್ಲಕ್ಷಕ್ಕೆ ಒಳಗಾದಂತೆ ಮುಂದೊಂದು ದಿನ ನಿಮಗೂ ಆಗುತ್ತದೆ ಎಂದು ಅಭಿಮಾನಿಯೊಬ್ಬ ಮನೋಜ್ ತಿವಾರಿಗೆ ಟ್ವೀಟ್ ಮಾಡಿದ್ದು ಇದಕ್ಕೆ ತಮ್ಮ ಕ್ರಿಕೆಟ್ ಬದುಕು ಹೇಗಿರಲಿದೆ...
ಮನೋಜ್ ತಿವಾರಿ
ಮನೋಜ್ ತಿವಾರಿ
Updated on
ಕೋಲ್ಕತ್ತಾ: ಅಂಬಟಿ ರಾಯುಡು ನಿರ್ಲಕ್ಷಕ್ಕೆ ಒಳಗಾದಂತೆ ಮುಂದೊಂದು ದಿನ ನಿಮಗೂ ಆಗುತ್ತದೆ ಎಂದು ಅಭಿಮಾನಿಯೊಬ್ಬ ಮನೋಜ್ ತಿವಾರಿಗೆ ಟ್ವೀಟ್ ಮಾಡಿದ್ದು ಇದಕ್ಕೆ ತಮ್ಮ ಕ್ರಿಕೆಟ್ ಬದುಕು ಹೇಗಿರಲಿದೆ ಎಂದು ತಿವಾರಿ ಹೇಳಿದ್ದಾರೆ. 
ಇದಕ್ಕೆ ಮನೋಜ್ ತಿವಾರಿ ಅವರು ಆಯ್ಕೆ ಸಮಿತಿ ನನ್ನ ಕಡೆಗಣಿಸಿದ ಮಾತ್ರಕ್ಕೆ ಕ್ರಿಕೆಟ್ ನಿಂದ ನಿವೃತ್ತಿ ಆಗಲ್ಲ ಎಂದು ಹೇಳಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ಆಯ್ಕೆಯಾಗುವ ಇಂಗಿತ ಮನೋಜ್ ತಿವಾರಿ ಹೊಂದಿದ್ದರು. ಆದರೆ ತಮ್ಮನ್ನು ಆಯ್ಕೆ ಸಮಿತಿ ನಿರ್ಲಕ್ಷಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ತಿವಾರಿ ಟ್ವೀಟ್ ಮಾಡಿದ್ದರು. 
ಇದಕ್ಕೆ ಅಭಿಮಾನಿಯೊಬ್ಬರು ಮನೋಜ್ ತಿವಾರಿಗೆ ಟ್ವೀಟ್ ಮಾಡಿ ಅಂಬಟಿ ರಾಯುಡು ಅವರಂತೆ ಮನೋಜ್ ತಿವಾರಿಯನ್ನು ನೋಡುವ ಕಾಲ ಬಹಳ ದೂರವಿಲ್ಲ ಎಂದು ಹೇಳಿದ್ದರು. 
ಇದಕ್ಕೆ ಮನೋಜ್ ತಿವಾರಿ, ನನ್ನನ್ನು ಆಯ್ಕೆ ಸಮಿತಿ ಕಡೆಗಣಿಸಿದ ಮಾತ್ರಕ್ಕೆ ನಾನು ಕ್ರಿಕೆಟ್ ನಿಂದ ನಿವೃತ್ತಿ ಆಗಲ್ಲ. ದೇಶಕ್ಕಾಗಿ ನಾನು ಎಷ್ಟು ಪಂದ್ಯಗಳನ್ನು ಆಡಿದ್ದೇನೆ ಎಂಬುದರ ಮೂಲಕ ನನ್ನ ವೃತ್ತಿ ಜೀವನವನ್ನ ವ್ಯಾಖ್ಯಾನಿಸುವುದಿಲ್ಲ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com