ಚೆಂದುಳ್ಳಿ ಚೆಲುವೆ, ಕ್ರಿಕೆಟ್ ಆಟಗಾರ್ತಿ ಸಾರಾ ಟೇಲರ್ ನಗ್ನ ಫೋಟೋ ವೈರಲ್, ಇದಕ್ಕೆ ಸಾರಾ ಹೇಳಿದ್ದೇನು?

ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ ಈ ಹಿಂದೆ ಬ್ಯಾಟ್ ಹಿಡಿದು ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದರು. ಇದೀಗ ಇಂಗ್ಲೆಡ್ ತಂಡದ ಕ್ರಿಕೆಟ್ ಆಟಗಾರ್ತಿ ಸಾರಾ ಟೇಲರ್ ನಗ್ನವಾಗಿ ಕಾಣಿಸಿಕೊಂಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಸಾರಾ ಟೇಲರ್
ಸಾರಾ ಟೇಲರ್
Updated on

ಲಂಡನ್: ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ ಈ ಹಿಂದೆ ಬ್ಯಾಟ್ ಹಿಡಿದು ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದರು. ಇದೀಗ ಇಂಗ್ಲೆಡ್ ತಂಡದ ಕ್ರಿಕೆಟ್ ಆಟಗಾರ್ತಿ ಸಾರಾ ಟೇಲರ್ ನಗ್ನವಾಗಿ ಕಾಣಿಸಿಕೊಂಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.

ಸಾರಾ ಟೇಲರ್ ನಗ್ನವಾಗಿ ಕಾಣಿಸಿಕೊಂಡಿದ್ದ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. 

ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಸಾರಾ ನಾನು ಒಳ್ಳೆಯ ಉದ್ದೇಶಕ್ಕಾಗಿ ನಗ್ನವಾಗಿ ಫೋಟೋಗೆ ಪೋಸ್ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಲಂಡನ್ ಮಹಿಳಾ ಆರೋಗ್ಯ ಕೇಂದ್ರ ಮಹಿಳಾ ದೈಹಿಕ ಸಮಸ್ಯೆಗಳ ಬಗ್ಗೆ ಸೆಮಿನಾರ್ ನೀಡಲು ನನಗೆ ಆಹ್ವಾನ ನೀಡಿತ್ತು. ಈ ವೇಳೆ ನಗ್ನ ಫೋಟೋಶೂಟ್ ನಡೆಯಿತು. ಆರಂಭದಲ್ಲಿ ನನಗೂ ನಗ್ನವಾಗಿ ಕಾಣಿಸಿಕೊಳ್ಳಲು ತೂಸು ಸಂಕೋಚ ಆಯಿತು. ಒಳ್ಳೆಯ ಉದ್ದೇಶವಿದ್ದಿದ್ದರಿಂದ ನಾನು ಫೋಟೋಶೂಟ್ ಮಾಡಿಸಿಕೊಂಡೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com