ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್?

ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಹೆಸರಿನ ಜೊತೆ ಖ್ಯಾತ ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಜೊತೆ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕೇಳಿಬಂದಿದೆ.
ಕೆಎಲ್ ರಾಹುಲ್-ಆತಿಯಾ ಶೆಟ್ಟಿ
ಕೆಎಲ್ ರಾಹುಲ್-ಆತಿಯಾ ಶೆಟ್ಟಿ

ಮುಂಬೈ: ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಹೆಸರಿನ ಜೊತೆ ಖ್ಯಾತ ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಜೊತೆ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕೇಳಿಬಂದಿದೆ.

ನಟಿ ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ದಿನಗಳಿಂದ ಕೇಳಿಬಂದಿತ್ತು. ಆದರೆ ಈ ಜೋಡಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಆತಿಯಾ ಇನ್ ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ವೊಂದಕ್ಕೆ ವಿನ್ಯಾಸಗಾರ ವಿಕ್ರಮ್ ಫದ್ನಿಸ್ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. 

ವಿಕ್ರಮ್ ಫದ್ನಿಸ್ ತಮ್ಮ ಕಾಮೆಂಟ್ ನಲ್ಲಿ ಕೆಲ ದಿನಗಳಿಂದ ನೀವು ಹೆಚ್ಚು ಹೈಪರ್ ಹಾಗೂ ಉತ್ಸಾಹ ಭರಿತರಾಗಿರುವಂತೆ ಕಾಣಿಸುತ್ತಿದ್ದೀರಿ. ಹಾಗಿದ್ದರೆ ಕೆಎಲ್ ಗೆ ಹೋಗೋಣವೇ? ಕೌಲಾಲಂಪುರ? ಎಂದು ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಕಮೆಂಟ್ ಗಳನ್ನು ಮಾಡಿದ್ದೇ ತಡ ವಿಕ್ರಮ್ ಮತ್ತೊಂದು ಕಾಮೆಂಟ್ ಮಾಡಿ ನಾನು ಅಂಪೈರ್ ಗೆ ದೂರು ನೀಡಲಿದ್ದೇನೆ ಎಂದಿದ್ದಾರೆ. 

ಇದನ್ನು ಗಂಭೀರವಾಗಿ ಪರಿಗಣಿಸಿದ ಆತಿಯಾ ಶೆಟ್ಟಿ, ನಿಮ್ಮನ್ನು ಬ್ಲಾಕ್ ಮಾಡುವ ಸಮಯ ಬಂದಿದೆ ಎಂದು ವಿಕ್ರಮ್ ಫದ್ನಿಸ್ ಗೆ ತಿರುಗೇಟು ನೀಡಿದ್ದಾರೆ. 

 
 
 
 
 
 
 
 
 
 
 
 
 

always, always

A post shared by Athiya Shetty (@athiyashetty) on

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com