ಹಿನ್ನೋಟ 2019: ಕ್ರಿಕೆಟ್‌ನಲ್ಲಿ ಮರೆಯಲಾಗದ ಫನ್ನಿ ಕ್ಷಣಗಳು!

ನಿಜಕ್ಕೂ 2019 ಕ್ರಿಕೆಟ್ ಜಗತ್ತಿನಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಇನ್ನು ಕೆಲ ಆಟಗಾರರು ಮೈದಾನದಲ್ಲಿ ಆಟಗಾರರನ್ನು ಕೆಣಕಿದ್ದು ಅದಕ್ಕೆ ತಿರುಗೇಟು ಸಿಕ್ಕಿದೆ. ಇನ್ನು ಕೆಲ ಪ್ರೇಕ್ಷಕರು ರಾತ್ರೋರಾತ್ರಿ ಫೇಮಸ್ ಆದರೆ, ಪೂನಂ ಪಾಂಡೆ ಟೀಂ ಇಂಡಿಯಾವನ್ನು ಹುರಿದುಂಬಿಸಲು ವಿಡಿಯೋಗಳನ್ನು ಶೇರ್ ಮಾಡಿದ್ದಳು.
ಕ್ರಿಕೆಟ್ ಫನ್ನಿ ಫೋಟೋ
ಕ್ರಿಕೆಟ್ ಫನ್ನಿ ಫೋಟೋ
Updated on

ನಿಜಕ್ಕೂ 2019 ಕ್ರಿಕೆಟ್ ಜಗತ್ತಿನಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಇನ್ನು ಕೆಲ ಆಟಗಾರರು ಮೈದಾನದಲ್ಲಿ ಆಟಗಾರರನ್ನು ಕೆಣಕಿದ್ದು ಅದಕ್ಕೆ ತಿರುಗೇಟು ಸಿಕ್ಕಿದೆ. ಇನ್ನು ಕೆಲ ಪ್ರೇಕ್ಷಕರು ರಾತ್ರೋರಾತ್ರಿ ಫೇಮಸ್ ಆದರೆ, ಪೂನಂ ಪಾಂಡೆ ಟೀಂ ಇಂಡಿಯಾವನ್ನು ಹುರಿದುಂಬಿಸಲು ವಿಡಿಯೋಗಳನ್ನು ಶೇರ್ ಮಾಡಿದ್ದಳು. ವಿಚಿತ್ರ ರನೌಟ್ ಗಳು, ಅದ್ಭುತ ಕ್ಯಾಚ್ ಗಳು, ಭರ್ಜರಿ ಬ್ಯಾಟಿಂಗ್ ಪ್ರದರ್ಶನ 2019ರಲ್ಲಿ ಕಂಡ ಮರೆಯಲಾಗದ ಘಟನೆಗಳು.

ಹಿಂಗೂ ಸಿಕ್ಸ್ ಹೊಡಿಬಹುದಾ, ಬಾಂಗ್ಲಾ ಬ್ಯಾಟ್ಸ್‌ಮನ್ ಸಿಕ್ಸ್ ಕಂಡು ಕಕ್ಕಾಬಿಕ್ಕಿಯಾದ ಕೊಹ್ಲಿ, ವಿಡಿಯೋ ವೈರಲ್!
ಭರ್ಜರಿ ಹಾಗೂ ಕ್ಲಾಸಿಕ್ ಸಿಕ್ಸ್ ಹೊಡೆಯುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖ್ಯಾತರು. ಆದರೆ ಪ್ರವಾಸಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸ್ ಕಂಡು ಕೊಹ್ಲಿಯೇ ಶಾಕ್ ಆಗಿದ್ದರು. ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಬಾಂಗ್ಲಾದ ಬ್ಯಾಟ್ಸ್ ಮನ್ ಮೆಹಿದಿ ಲೇಗ್ ಸೈಡ್ ನಲ್ಲಿ ಬ್ಯಾಟ್ ಬೀಸಿದರು. ಚೆಂಡು ಕೀಪರ್ ತಲೆ ಮೇಲೆ ಹೋಗಿ ಬೌಂಡರಿ ಸೇರಿತು.

ಕ್ರಿಕೆಟ್ ಇತಿಹಾಸದಲ್ಲೇ ಫನ್ನಿ ರನೌಟ್ ಮಿಸ್; ಕಕ್ಕಾ ಬಿಕ್ಕಿಯಾಗಿ ನಿಂತ ಅಂಪೈರ್!
ಕೈಗೆ ಬಂದ ತುತ್ತು, ಬಾಯಿಗೆ ಬಂದಿಲ್ಲ ಎಂಬ ಗಾದೆ ಇದೆ. ಅದೇ ರೀತಿ ಕೈಗೆ ಬಂದ ಚೆಂಡನ್ನು ರನೌಟ್ ಮಾಡದೆ ಕೀಪರ್ ಗೆ ಎಸೆದ ವಿಚಿತ್ರ ಘಟನೆ ವರದಿಯಾಗಿದೆ. ಕೇಟ್ ಕ್ರಾಸ್ ಎಸೆದ ಚೆಂಡನ್ನು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕವರ್ಸ್ ನಲ್ಲಿ ಹೊಡೆದು ಸಿಂಗಲ್ ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಸುಲಭವಾಗಿ ರನೌಟ್ ಆಗುವ ಸಾಧ್ಯತೆ ಇತ್ತು. ಆದರೆ ಬೌಲರ್ ಎಡವಟ್ಟಿನಿಂದ ಔಟ್ ಆಗಿಲಿಲ್ಲ. ಸಿಕ್ಕ ಚೆಂಡನ್ನು ಫೀಲ್ಡರ್ ನೇರವಾಗಿ ಬೌಲರ್ ಕೇಟ್ ಕೈಗೆ ಎಸೆದಿದ್ದಾರೆ. ಈ ವೇಳೆ ನಾನ್ ಸ್ಟ್ರೈಕ್ ಕಡೆ ಓಡುತ್ತಿದ್ದ ಬ್ಯಾಟ್ಸ್ ಮನ್ ಕ್ರಿಸ್ ನ ಮಧ್ಯದಲ್ಲಿದ್ದರು. ಇನ್ನು ತಾವು ಔಟ್ ಆಗುತ್ತೇವೆ ಎಂದುಕೊಂಡು ಓಡಿ ಬರುತ್ತಿದ್ದರು. ಆದರೆ ಬೌಲರ್ ಚೆಂಡನ್ನು ವಿಕೆಟ್ ಗೆ ಹೊಡೆಯದೆ ಕೀಪರ್ ಗೆ ಎಸೆದರು. ಅಷ್ಟರಲ್ಲಿ ಸ್ಟ್ರೈಕ್ ಕಡೆ ಓಡುತ್ತಿದ್ದ ಆಟಗಾರ್ತಿ ಆರಾಮವಾಗಿ ಕ್ರಿಸ್ ಮುಟ್ಟಿದ್ದರಿಂದ ರನೌಟ್ ಮಿಸ್ ಆಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೌಲರ್ ನಗೆಪಾಟಲಿಗೆ ಗುರಿಯಾಗಿದ್ದಾರೆ.

ತನ್ನದೇ ರನೌಟ್ ನೋಡಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡ ಗುರಿಂದರ್ ಸಂದು, ವಿಡಿಯೋ ವೈರಲ್!

ಕ್ರಿಕೆಟ್ ಇತಿಹಾಸದಲ್ಲಿ ಹಲವು ಹಾಸ್ಯಾತ್ಮಕ, ರೋಚಕ ರನೌಟ್ ಗಳ ಸರಮಾಲೆನೇ ಇದೆ. ಆದರೆ ಗುರಿಂದರ್ ಸಂದು ತನ್ನದೇ ಎಡವಟ್ಟಿನಿಂದ ಸಿಲ್ಲಿಯಾಗಿ ರನೌಟ್ ಆಗಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು.

'ಮಾಯವಾಯ್ತ ಚೆಂಡು'?: ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕಲು ಪರದಾಡಿದ ಫೀಲ್ಡರ್ಸ್, ವಿಡಿಯೋ ನೋಡಿ ನಗ್ತೀರಾ! ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಿಡಿಸಿದ ಚೆಂಡು ಬೌಂಡರಿ ಗೆರೆಯಲ್ಲಿ ದಿಢೀರ್ ಅಂತ ಮಾಯವಾಯ್ತಾ. ಹೌದು ಅನ್ನುವಂತೆ ಕೆಲವೊತ್ತು ಫೀಲ್ಡರ್ಸ್ ಚೆಂಡನ್ನು ಹುಡುಕಾಡಿದ ವಿಡಿಯೋ ಇದೀಗ ವೈರಲ್ ಆಗಿತ್ತು. ಮಹಾರಾಜ್ ಬೌಲಿಂಗ್ ನಲ್ಲಿ ಜಡೇಜಾ ಚೆಂಡನ್ನು ಬಾರಿಸಿದರು. ಚೆಂಡು ಬೌಂಡರಿಯಲ್ಲಿ ಹಾಕಲಾಗಿದ್ದ ರೂಫ್ಗೆ ಸಿಲುಕಿಕೊಂಡಿದೆ. ಮೊದಲಿಗೆ ಚೆಂಡು ಯಾರಿಗೂ ಕಾಣಸಿಕ್ಕಿರಲಿಲ್ಲ. ಫೀಲ್ಡರ್ಸ್ ಜೊತೆಗೆ ಬಾಲ್ ಬಾಯ್ ಗಳು ಸಹ ಚೆಂಡನ್ನು ಹುಡುಕಾಡುತ್ತಿದ್ದರು. ಈ ಮಧ್ಯೆ ಕ್ಯಾಮೆರಾ ಮ್ಯಾನ್ ಜೂಮ್ ಹಾಕಿ ಚೆಂಡನ್ನು ತೋರಿಸಿದರು. ಆದರೆ ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕುತ್ತಿದ್ದವರು ಟಿವಿ ಪರದೆಯನ್ನು ನೋಡದ ಅವರಿಗೆ ತಿಳಿಯಲಿಲ್ಲ. ಈ ವೇಳೆ ಮಾರ್ಕನ್ ಓಡಿ ಬಂದು ಚೆಂಡನ್ನು ತೆಗೆದುಕೊಂಡರು. ಈ ವಿಡಿಯೋ ನೆರೆದಿದ್ದ ಪ್ರೇಕ್ಷಕರಲ್ಲಿ ನಗು ಬರಿಸಿತ್ತು.

ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!
ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿತ್ತು. ಮಿಚೆಲ್ ಸ್ಟಾರ್ಕ್ ಗಂಟೆಗೆ 140 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಈ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್ ಮುಂದಾದಾಗ ಚೆಂಡು ನೇರವಾಗಿ ಅಬ್ಡೊಮಿನಲ್ ಗಾರ್ಡ್ ಗೆ ಬಿದ್ದಿದೆ. ಕೂಡಲೇ ನೋವಿನಿಂದ ರೂಟ್ ಕುಸಿದು ಬಿದ್ದರು.

ಗೆದ್ದ ಖುಷಿಯಲ್ಲಿ ಲಂಕಾ ಆಟಗಾರರ ಎಡವಟ್ಟು: ಮೈದಾನದಲ್ಲಿ ನಡೆದಿದ್ದೇನು? ವಿಡಿಯೋ ವೈರಲ್!

ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮುಖಭಂಗಕ್ಕೀಡಾಗಿದ್ದ ಶ್ರೀಲಂಕಾ ಇದೀಗ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿತ್ತು. ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಮೊದಲ ಸರಣಿ ಗೆದ್ದ ಲಂಕಾ ಆಟಗಾರರು ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಈ ವೇಳೆ ಆಟಗಾರ ಕುಸಲ್ ಮೆಂಡಿಸ್ ಮೈದಾನದಲ್ಲೇ ಬೈಕ್ ಓಡಿಸಿ ಎಡವಟ್ಟು ಮಾಡಿಕೊಂಡಿದ್ದರು. ಸಹ ಆಟಗಾರನನ್ನು ಹಿಂದೆ ಕೂರಿಸಿಕೊಂಡು ಮೈದಾನದಲ್ಲಿ ಮೆಂಡಿಸ್ ವೇಗವಾಗಿ ಬೈಕ್ ಓಡಿಸುತ್ತಿದ್ದು ಈ ವೇಳೆ ಆಯಾ ತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಬೈಕ್ ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿ ಬಂದು ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಧೋನಿ ಪಕ್ಕ ಕುಳಿತ ರೀತಿಯಲ್ಲಿ ಅನುಷ್ಕಾ ಫೋಟೋ ವೈರಲ್, ನೆಟಿಗರ ವಿರುದ್ಧ ಕೊಹ್ಲಿ ಆಕ್ರೋಶ
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳಿಂದ ರೋಚಕ ಸೋಲಿನಿಂದ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಂದಿದ್ದು ಇದರ ಬೆನ್ನಲ್ಲೇ ನೆಟಿಗರು ಧೋನಿ ಪಕ್ಕದಲ್ಲಿ ಅನುಷ್ಕಾ ಶರ್ಮಾ ಕುಳಿತಿರುವ ಫೋಟೋ ವೈರಲ್ ಮಾಡಿದ್ದು ಇದಕ್ಕೆ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಟೀಂ ಇಂಡಿಯಾ ಗೆಲುವಿಗೆ ಮಾದಕ ಮೈಮಾಟ ಪ್ರದರ್ಶಿಸಿದ ಪೂನಂ ಪಾಂಡೆ, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯ ಓಟ ಮುಂದುವರೆಸಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಗೆಲುವನ್ನು ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿತ್ತು. ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 125 ರನ್ ಗಳಿಂದ ಗೆಲುವು ದಾಖಲಿಸಿತ್ತು. ಈ ಖುಷಿಗೆ ಪೂನಂ ಪಾಂಡೆ ಹಾಟ್ ವಿಡಿಯೋವನ್ನು ಹರಿಬಿಟ್ಟಿದ್ದರು.

 
 
 
 
 
 
 
 
 
 
 
 
 

I will keep my Promise. #indvswestindies #cwc2019

A post shared by Poonam Pandey (@ipoonampandey) on

ಎದುರಾಳಿ ಬೌಲರ್ ಸುಮ್ಮನಾದ್ರೂ ಕೊಹ್ಲಿಯ ಆಕ್ರೋಶ ಮಾತ್ರ ತಣ್ಣಗಾಗಿಲ್ಲ, ಈ ವಿಡಿಯೋ ನೋಡಿ!

ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಪಂದ್ಯದಲ್ಲಿ ಎದುರಾಳಿ ಬೌಲರ್ ನಿನ್ನ ಸಹವಾಸ ಬೇಡ ಎಂದು ಸುಮ್ಮನಾದ್ರೂ ವಿರಾಟ್ ಕೊಹ್ಲಿ ಮಾತ್ರ ಆತನನ್ನು ಕೆಣಕದೆ ಬಿಡಲಿಲ್ಲ.

 
 
 
 
 
 
 
 
 
 
 
 
 

Wohooooo - Look where I Hit that one #TeamIndia #INDvWI @paytm

A post shared by Team India (@indiancricketteam) on

 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com