ವಿರಾಟ್ ಕೊಹ್ಲಿಯನ್ನು ರಿಚರ್ಡ್ಸ್, ಇಮ್ರಾನ್‌ ಖಾನ್‌ಗೆ ಹೋಲಿಸಿದ ರವಿ ಶಾಸ್ತ್ರಿ

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರು ನಾಯಕ ವಿರಾಟ್ ಕೊಹ್ಲಿ ಅವರನ್ನು ವೆಸ್ಟ್‌ ಇಂಡೀಸ್ ದಿಗ್ಗಜ ಸರ್ ವಿವ್ ರಿಚರ್ಡ್ಸ್ ಹಾಗೂ ಪಾಕಿಸ್ತಾನ ತಂಡದ ಮಾಜಿ...
ರವಿ ಶಾಸ್ತ್ರಿ - ವಿರಾಟ್ ಕೊಹ್ಲಿ
ರವಿ ಶಾಸ್ತ್ರಿ - ವಿರಾಟ್ ಕೊಹ್ಲಿ
ವೆಲ್ಲಿಂಗ್ಟನ್: ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರು ನಾಯಕ ವಿರಾಟ್ ಕೊಹ್ಲಿ ಅವರನ್ನು ವೆಸ್ಟ್‌ ಇಂಡೀಸ್ ದಿಗ್ಗಜ ಸರ್ ವಿವ್ ರಿಚರ್ಡ್ಸ್ ಹಾಗೂ ಪಾಕಿಸ್ತಾನ ತಂಡದ ಮಾಜಿ ನಾಯಕ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಹೋಲಿಸಿದ್ದಾರೆ.
ವಿವ್ ರಿಚರ್ಡ್ಸ್‌ ಆಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ವಿರಾಟ್ ಕೊಹ್ಲಿ ಕೂಡಾ ಆಟದಲ್ಲಿ ಅಧಿಪತ್ಯ ಸ್ಥಾಪಿಸಲು ಬಯಸುತ್ತಾರೆ. ಶಿಸ್ತು, ತರಬೇತಿ, ತ್ಯಾಗ ಹೀಗೆ ಎಲ್ಲ ವಿಚಾರದಲ್ಲೂ ಅವಿಶ್ವಸನೀಯ. ನನಗನಿಸುತ್ತದೆ ಭಾರತಕ್ಕೆ ಅಂತದೊಂದು ನಾಯಕ ದೊರಕಿರುವುದೇ ಅದೃಷ್ಟ ಎಂದು ರವಿ ಶಾಸ್ತ್ರಿ ಕೊಹ್ಲಿ ಹಾಡಿ ಹೊಗಳಿದ್ದಾರೆ.
ಇನ್ನು ಅನೇಕ ವಿಧಗಳಲ್ಲಿ ವಿರಾಟ್ ಕೊಹ್ಲಿ ನನಗೆ ಪಾಕಿಸ್ತಾನದ ದಿಗ್ಗಜ ಇಮ್ರಾನ್ ಖಾನ್ ನೆನಪಿಗೆ ಬರುತ್ತಾರೆ. ಕೊಹ್ಲಿ ತಮ್ಮದೇ ಆದ ಮಾನದಂಡಗಳನ್ನು ಸೃಷ್ಟಿಸುತ್ತಾರೆ. ಅಲ್ಲದೆ ನಾಯಕನಾಗಿ ಮುಂಭಾಗದಲ್ಲಿ ನಿಂತು ತನ್ನದೇ ರೀತಿಯಲ್ಲಿ ಮುನ್ನಡೆಸುತ್ತಾರೆ ಎಂದಿದ್ದಾರೆ. 
ಇದೇ ವೇಳೆ ಕೊಹ್ಲಿ ಇನ್ನು ಕೆಲವು ವರ್ಷ ಟೀಂ ಇಂಡಿಯಾ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಅದ್ಭುತ ಫಾರ್ಮ್ ಕಂಡುಕೊಂಡಿದ್ದು, ಕಳೆದ ವರ್ಷವಂತೂ ಪ್ರಮುಖ ಮೂರು ಸೇರಿದಂತೆ ಎಲ್ಲ ಐದು ಐಸಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಇದರಲ್ಲಿ ಐಸಿಸಿ ವರ್ಷದ ಆಟಗಾರ, ವರ್ಷದ ಟೆಸ್ಟ್ ಆಟಗಾರ, ವರ್ಷದ ಏಕದಿನ ಆಟಗಾರ ಸೇರಿದಂತೆ ವರ್ಷದ ಟೆಸ್ಟ್ ಹಾಗೂ ಏಕದಿನ ನಾಯಕ ಪಟ್ಟಗಳು ಸೇರಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com