ಟಿ-20 ಫೈನಲ್ : ಸ್ಮೃತಿ ಮಂಧಾನ ಶ್ರಮ ವ್ಯರ್ಥ, ಸೋತ ಭಾರತದ ವನಿತೆಯರು

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಮಿಂಚಿದರೂ ಟೀಂ ಇಂಡಿಯಾ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು
ಸ್ಮೃತಿ ಮಂಧನಾ
ಸ್ಮೃತಿ ಮಂಧನಾ

ಹ್ಯಾಮಿಲ್ಟನ್:  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಮಿಂಚಿದರೂ ಟೀಂ ಇಂಡಿಯಾ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. ಇದರೊಂದಿಗೆ ಎಲ್ಲಾ ಮೂರು ಚುಟುಕು ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ವೈಟ್ ವಾಶ್ ಅನುಭವಿಸಿದೆ.

ಸೆಡ್ಡಾನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ  ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಕಿವೀಸ್ ಪರ ಸೋಫಿ ಡಿವೈನ್ 72 ರನ್ ಗಳಿಸಿದರೆ, ನಾಯಕಿ ಆಮಿ ಸ್ಯಾಟರ್ ವೈಟ್ 31 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದರು.

162 ರನ್ ಗುರಿ ಬೆನ್ನಟ್ಟಿದ್ದ ಭಾರತೀಯ ಮಹಿಳೆಯರು ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಕಳೆದೆರಡು ಪಂದ್ಯಗಳಿಂದ ವಿಫಲವಾಗಿದ್ದ ಓಪನಿಂಗ್ ಇಂದಿನ ಪಂದ್ಯದಲ್ಲೂ ಕೈಕೊಟ್ಟಿತು.
ಪ್ರಿಯಾ ಪೊನಿಯಾ ಕೇವಲ ಒಂದು ರನ್ ಗಳಿಸಿದರೆ, ಜೆಮಿಮಾ ರೋಡಿಗ್ರಸ್  21 ರನ್ ಗಳಿಸಿದರು.ಸ್ಮೃತಿ ಮಂಧನಾ ಇಂದು ಮತ್ತೆ ಭರ್ಜರಿ ಪ್ರದರ್ಶನ ನೀಡಿದರು. 62 ಎಸೆತಗಳಿಂದ 86 ರನ್ ಬಾರಿಸಿ, ಡಿವೈನ್ ಗೆ ವಿಕೆಟ್  ಒಪ್ಪಿಸಿ  ತಮ್ಮ ಚೊಚ್ಚಲ ಟಿ-ಟ್ವೆಂಟಿ ಶತಕದಿಂದ ವಂಚಿತರಾದರು.
ಮಂಧನಾ ವಿಕೆಟ್ ಪತನದ ನಂತರ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಇದರಿಂದಾಗಿ ರನ್ ವೇಗವಾಗಿ ಬರಲಿಲ್ಲ. ಕೊನೆಯ  ಓವರ್ ನಲ್ಲಿ ಗೆಲ್ಲಲು 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಭಾರತ ಕೇವಲ 13 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಮಿಥಾಲಿ ರಾಜ್ 24 ರನ್ ಗಳಿಸಿದರೆ, ದೀಪ್ತಿ  ಶರ್ಮಾ 21 ರನ್ ಗಳಿಸಿದರು. ಇದರಿಂದಾಗಿ ಎರಡು ವಿಕೆಟ್ ಗಳಿಂದ ಸೋಲಿಗೆ ಶರಣಾಯಿತು.  ಸೋಪಿ ಡಿವೈನ್ ಪಂದ್ಯ ಶ್ರೇಷ್ಠ, ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com