ವಿಶ್ವಕಪ್ ಕ್ರಿಕೆಟ್ : ಭದ್ರತೆ ಕುರಿತ ಭಾರತದ ಅನುಮಾನ ಐಸಿಸಿಯಿಂದ ಬಗೆಹರಿಯುವ ಸಾಧ್ಯತೆ
ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯಲ್ಲಿ ಭಾರತೀಯ ಆಟಗಾರರ ಆತಂಕಕ್ಕೆ ಕಾರಣವಾಗಿದ್ದ ಭದ್ರತಾ ವ್ಯವಸ್ಥೆ ಅನುಮಾನ ಬುಧವಾರ ನಡೆಯಲಿರುವ ಚೀಪ್ ಎಕ್ಸಿಕ್ಯೂಟಿವ್ ಕಮಿಟಿ- (ಸಿಇಸಿ) ಸಭೆಯಲ್ಲಿ ಬಗೆಹರಿಯುವ ಸಾಧ್ಯತೆ ಇದೆ.
ದುಬೈ: ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯಲ್ಲಿ ಭಾರತೀಯ ಆಟಗಾರರ ಆತಂಕಕ್ಕೆ ಕಾರಣವಾಗಿದ್ದ ಭದ್ರತಾ ವ್ಯವಸ್ಥೆ ಅನುಮಾನ ಬುಧವಾರ ನಡೆಯಲಿರುವ ಚೀಪ್ ಎಕ್ಸಿಕ್ಯೂಟಿವ್ ಕಮಿಟಿ ಸಭೆಯಲ್ಲಿ ಬಗೆಹರಿಯುವ ಸಾಧ್ಯತೆ ಇದೆ.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಜೂನ್ 16 ರಂದು ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸುವಂತೆ ಜನಾಗ್ರಹ ಕೇಳಿಬಂದಿತ್ತು.