ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ

ನಾಳೆ ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಧೋನಿ ಕಳಪೆ ಪ್ರದರ್ಶನವೇ ಟೀಂ ಇಂಡಿಯಾ ಚಿಂತೆ

ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಕಳಪೆ ಪ್ರದರ್ಶನ ಟೀಂ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ.
Published on

ಅಡಿಲೇಡ್ : ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಮಧ್ಯಮ  ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಕಳಪೆ ಪ್ರದರ್ಶನ  ಟೀಂ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹಾರ್ದಿಕ್ ಪಾಂಡ್ಯ ಮೇಲೆ ಶಿಸ್ತು ಕ್ರಮ ಕೈಗೊಂಡು ಹಠಾತ್ತನೆ ಅಮಾನತು ಮಾಡಿರುವುದು ಸಮತೋಲನದ  ಬ್ಯಾಟಿಂಗ್ ಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.  

ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿದ್ದರೂ ಧೋನಿ ಅವರ ನಿಧಾನಗತಿಯ ಆಟದಿಂದ ಟೀಂ ಇಂಡಿಯಾ 34 ರನ್ ಗಳ ಅಂತರದಲ್ಲಿ ಸೋಲನ್ನುಭವಿಸಿತ್ತು, ಧೋನಿ 96 ಎಸೆತಗಳಲ್ಲಿ  51 ರನ್   ಪಡೆದಿದ್ದರು. ಇದು ನಾಯಕ  ವಿರಾಟ್ ಕೊಹ್ಲಿ ಹಾಗೂ ತರಬೇತುದಾರ ರವಿಶಾಸ್ತ್ರಿ ಅವರಲ್ಲಿ ಅಸಮಾಧಾನ ಮೂಡಿಸಿದೆ.

ಉಪ ನಾಯಕ ರೋಹಿತ್ ಶರ್ಮಾ ಉತ್ತಮವಾಗಿ ಆಡಿದ್ದರೂ ನಂಬರ್ 5 ಕ್ರಮಾಂಕದಲ್ಲಿ ಧೋನಿ ಅವರ ಪ್ರದರ್ಶನ ಬ್ಯಾಟಿಂಗ್  ಕ್ರಮಾಂಕದ ಮೇಲೆ ಚಿಂತೆಗೀಡುವಂತೆ ಮಾಡಿದೆ.  2016 ರಿಂದಲೂ ಮೊದಲ ಕ್ರಮಾಂಕದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ಮತ್ತು ಕೋಹ್ಲಿ ಆಡುತ್ತಿದ್ದಾರೆ.

ಏಷ್ಯಾ ಕಪ್  ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ  ಅಂಬಟ್ಟಿ ರಾಯುಡು ಉತ್ತಮ ಪ್ರದರ್ಶನ ತೋರಿದ್ದರು.  ಆದರೆ, ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಂಬಟ್ಟಿ ರಾಯುಡು  ಆಡುವ ಅನುಮಾನ ಇದೆ.

ಹಾರ್ದಿಕ್ ಪಾಂಡ್ಯ ಅಮಾನತು ಬ್ಯಾಟಿಂಗ್ ಹಾಗೂ ಬೌಲಿಂಗ್  ಎರಡರ ಮೇಲೂ ಪರಿಣಾಮ ಬೀರಲಿದೆ. ಈ ಸಂದರ್ಭದಲ್ಲಿ ಕೇದಾರ್ ಜಾದವ್ ಪರ್ಯಾಯವಾಗಿ ಕಾಣುತ್ತಿದ್ದಾರೆ. ಅಲ್ ರೌಂಡರ್ ರವೀಂದ್ರ ಜಡೇಜಾ  ಅವರ ಕೌಶಲ್ಯ ಪರಿಗಣಿಸುವ ಸಾಧ್ಯತೆಯೂ ಇದೆ

ಭಾರತ ತಂಡ ಇಂತಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟ್ಟಿ ರಾಯುಡು,  ದಿನೇಶ್ ಕಾರ್ತಿಕ್, ಕೇದಾರ್ ಜಾದವ್,  ಧೋನಿ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್,  ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್,  ಖಲೀಲ್ ಅಹ್ಮದ್.  ಮೊಹಮ್ಮದ್ ಶಮಿ,  ಮೊಹಮ್ಮದ್ ಸಿರಾಜ್ , ವಿಜಯ್ ಶಂಕರ್

ಆಸ್ಟ್ರೇಲಿಯಾ ತಂಡ ಇಂತಿದೆ. ಅರೊನ್ ಪಿಂಚ್,  ಜಾಸನ್   ಜೇಸನ್ ಬೆಹೆಂಡ್ರೊರ್ಫ್, ಪೀಟರ್ ಹ್ಯಾಂಡ್ಸ್ ಕೊಂಬ್, ಉಸ್ಮಾನ್ ಕಾವಾಜಾ, ನಾಥ್ಯನ್ ಲ್ಯಾನ್, ಮಿಚ್ ಮಾರ್ಷ್,  ಎಸ್ . ಮಾರ್ಷ್,  ಜಿ. ಮ್ಯಾಕ್ಸ್ ವೆಲ್,  ಜೆ. ಪೀಟರ್ ಪೀಟರ್ ಸಿಡ್ಲ್,  ಬಿಲ್ಲಿ ಸ್ಟಾನ್ ಲೆಕ್, ಎಂ. ಸ್ಟೊಯ್ ನೈಸ್, ಅಸ್ಟೊನ್ ಟರ್ನರ್, ಅಡಂ ಜಂಪಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com