ಪಾಕ್ ನಾಯಕನ ಕೀಳು ಮಟ್ಟದ ಮನಸ್ಥಿತಿ; ಎದುರಾಳಿ ಬ್ಯಾಟ್ಸ್‌ಮನ್ ತಾಯಿ ಬಗ್ಗೆ ಹೇಳಿಕೆ!

ಎದುರಾಳಿ ತಂಡದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿ ಹಾಕುವ ಸಲುವಾಗಿ ಸ್ಲೆಡ್ಜಿಂಗ್ ಮಾಡುವುದು ಸಾಮಾನ್ಯ. ಆದರೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ದಕ್ಷಿಣ ಆಫ್ರಿಕಾ...
ಆಂಡಿಲೆ ಫೆಹ್ಲುಕ್ವೇವೊ-ಸರ್ಫರಾಜ್ ಅಹ್ಮದ್
ಆಂಡಿಲೆ ಫೆಹ್ಲುಕ್ವೇವೊ-ಸರ್ಫರಾಜ್ ಅಹ್ಮದ್
ಎದುರಾಳಿ ತಂಡದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿ ಹಾಕುವ ಸಲುವಾಗಿ ಸ್ಲೆಡ್ಜಿಂಗ್ ಮಾಡುವುದು ಸಾಮಾನ್ಯ. ಆದರೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಆಂಡಿಲೆ ಫೆಹ್ಲುಕ್ವೇವೊ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ತಾಯಿಯ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ತಮ್ಮ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. 
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಇನ್ನು ಪಂದ್ಯದ 37ನೇ ಓವರ್ ನಲ್ಲಿ ಆಂಡಿಲೆ ಫೆಹ್ಲುಕ್ವೇವೊ ಬ್ಯಾಟಿಂಗ್ ಮಾಡುತ್ತಿದ್ದಾಗ ಸರ್ಫರಾಜ್ ಲೇ ಕರಿಯ..ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಏನ್ ಪ್ರಾರ್ಥನೆ ಮಾಡಿ ಬಂದಿದ್ದೀಯಾ? ಎಂದು ಹಿಂದಿ ಮಿಶ್ರಿತ ಉರ್ದುವಿನಲ್ಲಿ ಹೇಳಿದ್ದು ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ಕೇಳಿಸಿತ್ತು. 
ಇದನ್ನು ಕೇಳಿಸಿಕೊಂಡ ಕಾಮೆಂಟೇಟರ್ ಮೇಕ್ ಹೇಸ್ ಮನ್ ಸಹ ಕಾಮೆಂಟೇಟರ್ ಪಾಕಿಸ್ತಾನದ ರಮೀಜ್ ರಾಜಾಗೆ ಸರ್ಫರಾಜ್ ಮಾತಿನ ಅರ್ಥ ಏನು ಎಂದು ಕೇಳಿದ್ದಾರೆ. ಇದಕ್ಕೆ ರಾಜಾ ಇದನ್ನು ಭಾಷಾಂತರ ಮಾಡೋದು ಬಹಳ ಕಷ್ಟ ಎಂದು ಹೇಳಿ ಸುಮ್ಮನಾಗಿದ್ದರು. 
ಇನ್ನು ಸೋಲುತ್ತಿದ್ದೇವೆ ಎಂಬ ಹತಾಶೆಯಿಂದ ಸರ್ಫರಾಜ್ ಅಹ್ಮದ್ ನಾಯಕನ ಸ್ಥಾನದಲ್ಲಿದ್ದೇನೆ ಎನ್ನುವುದನ್ನು ಮರೆತ ಆಂಡಿಲೆರನ್ನ ಜನಾಂಗೀಯವಾಗಿ ನಿಂದನೆ ಮಾಡಿರುವುದು ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸರ್ಫರಾಜ್ ಈ ನಡೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿ ಸರ್ಫರಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 203 ರನ್ ಗಳಿಗೆ ಆಲೌಟ್ ಆಗಿತ್ತು. 204 ರನ್ ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ದುಸೇನ್ ಅಜೇಯ 80 ಹಾಗೂ ಆಂಡಿಲೆ ಫೆಹ್ಲುಕ್ವೇವೊ ಅಜೇಯ 69 ರನ್ ಗಳ ನೆರವಿನಿಂದ ಪಂದ್ಯವನ್ನು ಗೆದ್ದು ಬೀಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com