
ಹ್ಯಾಮಿಲ್ಟನ್: ಭಾರತ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಿವೀಸ್ ವೇಗಿಗಳ ಸ್ವಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಸೋಲಿಗೆ ಶರಣಾಗಿದೆ. ಇನ್ನೂ 212 ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಸೋಲಿಗೆ ಶರಣಾದದ್ದು, ಮುಜುಗರದ ದಾಖಲೆಯಾಗಿದೆ.
ಇಂತಹ ಮುಜುಗರದ ಕೆಲ ದಾಖಲೆಗಳು ಇಲ್ಲಿವೆ.
ಹ್ಯಾಮಿಲ್ಟನ್ -212 ( ನ್ಯೂಜಿಲ್ಯಾಂಡ್ ವಿರುದ್ಧ 2019)
ಡ್ಯಾಮ್ ಬುಲ್ಲಾ -2019 ( ಶ್ರೀಲಂಕಾ ವಿರುದ್ಧ 2010)
ಹ್ಯಾಂಬಂಟೊಟ- 181( ಶ್ರೀಲಂಕಾ ವಿರುದ್ಧ 2012)
ಧರ್ಮಸಳ -176( ಶ್ರೀಲಂಕಾ ವಿರುದ್ಧ 2017)
ಸಿಡ್ನಿ- 174 ( ಆಸ್ಟ್ರೇಲಿಯಾ ವಿರುದ್ಧ 1981)
ಏಳನೇ ಬಾರಿಗೆ ಕನಿಷ್ಠ ಸ್ಕೂರು: ಕಡಿಮೆ ರನ್ ಗಳಿಂದ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಎರಡನೇ ಬಾರಿ ಸೋತಿದ್ದರೆ, ಒಟ್ಟಾರೇಯಾಗಿ ಏಳನೇ ಬಾರಿಗೆ ಈ ರೀತಿ ಸೋಲಿಗೆ ಶರಣಾಗಿದೆ.
ಕನಿಷ್ಠ ರನ್ ಗಳಿಂದ ಸೋತ ಪಂದ್ಯಗಳು
ಶಾರ್ಜಾ - 54 ( ಶ್ರೀಲಂಕಾ ವಿರುದ್ಧ 2000)
ಸಿಡ್ನಿ- 63 ( ಆಸ್ಟ್ರೇಲಿಯಾ ವಿರುದ್ಧ 1981)
ಕಾನ್ಪುರ - 78 ( ಶ್ರೀಲಂಕಾ ವಿರುದ್ಧ 1986)
ಸಿಯಾಲ್ ಕೋಟ್ -79 ( ಪಾಕಿಸ್ತಾನ ವಿರುದ್ಧ 1978)
ದಾಂಬುಲ್ಲಾ -88 ( ನ್ಯೂಜಿಲ್ಯಾಂಡ್ ವಿರುದ್ಧ 2010)
ಡರ್ಬನ್ - 91 ( ದಕ್ಷಿಣ ಆಫ್ರಿಕಾ ವಿರುದ್ಧ 2006)
ಹ್ಯಾಮಿಲ್ಟನ್ - 92 ( ನ್ಯೂಜಿಲ್ಯಾಂಡ್ ವಿರುದ್ಧ 2019)
2017 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 28 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಟೀ ಇಂಡಿಯಾ, ಎರಡನೇ ಬಾರಿಗೆ ಕನಿಷ್ಠ ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿದೆ.
ಟೀಂ ಇಂಡಿಯಾ ಕನಿಷ್ಠ ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡ ಪಂದ್ಯಗಳು
ಧರ್ಮಸಳ -28 ( ಶ್ರೀಲಂಕಾ ವಿರುದ್ಧ 2017)
ಹ್ಯಾಮಿಲ್ಟನ್ -35( ನ್ಯೂಜಿಲ್ಯಾಂಡ್ ವಿರುದ್ಧ 2019)
ಶಾರ್ಜಾ - 39 ( ಶ್ರೀಲಂಕಾ ವಿರುದ್ಧದ 2000)
ಬುಲಾವಾಯೊ -39 ( ನ್ಯೂಜಿಲ್ಯಾಂಡ್ ವಿರುದ್ಧ 2005)
ವಿರಾಟ್ ಕೊಹ್ಲಿ ಅವರ 12 ನಿರಂತರ ಅಂತಾರಾಷ್ಟ್ರೀಯ ಪಂದ್ಯಗಳ ಗೆದ್ದ ದಾಖಲೆಯನ್ನು ಮುರಿಯುುವಲ್ಲಿ ರೋಹಿತ್ ಶರ್ಮಾ ವಿಫಲ.
ನಂಬರ್ 10ರಲ್ಲಿ ಹೆಚ್ಚಿನ ರನ್ : ನಂಬರ್ 10 ರಲ್ಲಿ ಬ್ಯಾಟಿಂಗ್ ಮಾಡಿದ ಬೌಲರ್ ಯುಜುವೇಂದ್ರ ಚಾಹಲ್ 18 ರನ್ ಗಳಿಸಿದದ್ದು ಕೂಡಾ ಈ ಪಂದ್ಯದಲ್ಲಿನ ಹೆಚ್ಚಿನ ರನ್ ಗಳಿಕೆಯಾಗಿದೆ. ಪಾಕಿಸ್ತಾನದ ಟೊರೊಂಟೊದಲ್ಲಿ 1998ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜವಗಲ್ ಶ್ರೀನಾಥ್ 43 ರನ್ ಗಳಿಸಿದ್ದರು.
ಭಾರತ ವಿರುದ್ಧದ ಹೆಚ್ಚಿನ ವಿಕೆಟ್ ಪಡೆದ ಬೌಲರ್ ಗಳು: ಟ್ರೇಂಟ್ ಬೌಲ್ಟ್ 21 ರನ್ ಗಳಿಗೆ 5 ವಿಕೆಟ್ . ಇದಕ್ಕೂ ಮುನ್ನ 2005ರಲ್ಲಿ ಶೇನ್ ಬಾಂಡ್ 19 ರನ್ ಗಳಿಗೆ 6 ವಿಕೆಟ್ ಪಡೆದಿದ್ದರು.
ರೋಹಿತ್ ಶರ್ಮಾ ಅವರ 200ನೇ ಪಂದ್ಯ: ಇದು ಟೀಂ ಇಂಡಿಯಾ ಏಕದಿನ ಕ್ರಿಕೆಟ್ ಉಪನಾಯಕ ರೋಹಿತ್ ಶರ್ಮಾ ಆಡಿದ 200ನೇ ಏಕದಿನ ಪಂದ್ಯವಾಗಿದೆ. ಈ ಸಾಧನೆ ಮಾಡಿದ 79 ನೇ ಆಟಗಾರರಾಗಿದ್ದಾರೆ. 200 ಪಂದ್ಯಗಳಲ್ಲಿ ಅತಿ ಹೆಚ್ಚಿನ ರನ್ ಗಳಿಸಿದವರಲ್ಲಿ ರೋಹಿತ್ ಶರ್ಮಾ ಮೂರನೇಯವರಾಗಿದ್ದಾರೆ.
ವಿರಾಟ್ ಕೊಹ್ಲಿ -8888 ರನ್ ಗಳು
ಎಬಿ ಡಿವಿಲಿಯರ್ಸ್ - 8621 ರನ್ ಗಳು
ರೋಹಿತ್ ಶರ್ಮಾ- 7799 ರನ್ ಗಳು
ಸೌರವ್ ಗಂಗೂಲಿ -7747 ರನ್ ಗಳು
Advertisement