ಹಾರ್ದಿಕ್ ಪಾಂಡ್ಯ
ಕ್ರಿಕೆಟ್
ಭಾರತ ಸದ್ವರ್ತನೆಯ ತಂಡ: ಹಾರ್ದಿಕ್ ಪಾಂಡ್ಯ ವಿವಾದ ಕುರಿತು ಐಸಿಸಿ ಸಿಇಒ ಹೇಳಿದ್ದೇನು?
ಮಹಿಳೆಯ ವಿರುದ್ಧ ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಐಸಿಸಿ ಸಿಇಒ ಡೇವಿಡ್ ರಿಚರ್ಡಸನ್ ಅವರು, ವಿರಾಟ್ ಕೊಹ್ಲಿ ಟೀಂ ಇಂಡಿಯಾ...
ನವದೆಹಲಿ: ಮಹಿಳೆಯ ವಿರುದ್ಧ ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಐಸಿಸಿ ಸಿಇಒ ಡೇವಿಡ್ ರಿಚರ್ಡಸನ್ ಅವರು, ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಅತ್ಯುತ್ತಮ ರಾಯಭಾರಿ ಇನ್ನು ಭಾರತ ಸದ್ವರ್ತನೆಯ ತಂಡ ಎಂದು ಹೇಳಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಚಾರ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಡೇವಿಡ್ ರಿಚರ್ಡಸನ್ ಅವರನ್ನು ಪತ್ರಕರ್ತರು ಹಾರ್ದಿಕ್ ಪಾಂಡ್ಯರ ಅಶ್ಲೀಲ ಹೇಳಿಕೆ ಹಾಗೂ ನಿಷೇಧ, ನಿಷೇಧ ಹಿಂಪಡೆದ ಕುರಿತಂತೆ ಪ್ರಶ್ನಿಸಿದರು.
ಈ ವೇಳೆ ಡೇವಿಡ್ ರಿಚರ್ಡಸನ್, ಇದು ಐಸಿಸಿ ಸದಸ್ಯತ್ವ ತಂಡದ ಸಮಸ್ಯೆ ಈ ಸಮಸ್ಯೆ ಬಗ್ಗೆ ಬಿಸಿಸಿಐ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ. ಆದರೆ ಭಾರತ ಸದ್ವರ್ತನೆಯ ತಂಡ. ಅವರು ಬಂದು ಟೂರ್ನಿಯಲ್ಲಿ ಆಡುತ್ತಾರೆ ಮತ್ತು ಅಂಪೈರ್ ಗಳ ನಿರ್ಧಾರವನ್ನು ಸ್ವೀಕರಿಸುತ್ತಾರೆ ಎಂದರು.
ಹಾರ್ದಿಕ್ ಪಾಂಡ್ಯ ಸಮಸ್ಯೆಯನ್ನು ಭಾರತವೇ ನಿಭಾಯಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಹೌದು. ಭಾರತ ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದು ಜಾಗತಿಕ ಮಟ್ಟದಲ್ಲಿ ಇದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.

