ಭಾರತ ತಂಡ ಆಡಿರುವ 8 ಪಂದ್ಯಗಳಿಂದ ಆರು ಜಯ ಸಾಧಿಸಿ, ಒಂದು ಪಂದ್ಯ ರದ್ದಾಗಿದ್ದು, ಒಂದು ಪಂದ್ಯ ಸೋತಿದೆ. ಟೀಮ್ ಇಂಡಿಯಾ ಒಟ್ಟು 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಆಸ್ಟ್ರೇಲಿಯಾ ಬಳಿಕ ಸೆಮಿಫೈನಲ್ಸ್ ಪ್ರವೇಶಿಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಟೂರ್ನಿಯಲ್ಲಿ ಭಾರತ ಇನ್ನು ಒಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ.