ಕೊಹ್ಲಿಗೆ ದಂಡ ವಿಧಿಸಿದ ಗುರುಗ್ರಾಮ ಪುರಸಭೆ: ಕಾರಣ ಏನು, ದಂಡದ ಮೊತ್ತ ಎಷ್ಟು ಗೊತ್ತೇ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗುರುಗ್ರಾಮ ಪುರಸಭೆ ದಂಡ ವಿಧಿಸಿದೆ.
ಕೊಹ್ಲಿಗೆ ದಂಡ ವಿಧಿಸಿದ ಗುರುಗ್ರಾಮ ಪುರಸಭೆ: ಕಾರಣ ಏನು, ದಂಡದ ಮೊತ್ತ ಎಷ್ಟು ಗೊತ್ತೇ?
ಕೊಹ್ಲಿಗೆ ದಂಡ ವಿಧಿಸಿದ ಗುರುಗ್ರಾಮ ಪುರಸಭೆ: ಕಾರಣ ಏನು, ದಂಡದ ಮೊತ್ತ ಎಷ್ಟು ಗೊತ್ತೇ?
ಗುರುಗ್ರಾಮ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗುರುಗ್ರಾಮ ಪುರಸಭೆ ದಂಡ ವಿಧಿಸಿದೆ. 
2019 ರ ವಿಶ್ವಕಪ್ ನ ಮೊದಲ ಗೆಲುವಿನ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಮನೆಯಲ್ಲಿ ಕುಡಿಯುವ ನೀರನ್ನು ಕಾರು ಸ್ವಚ್ಛಗೊಳಿಸಲು ಬಳಸಿದ್ದಕ್ಕಾಗಿ ಪುರಸಭೆ 500 ರೂಪಾಯಿ ದಂಡ ವಿಧಿಸಿದೆ. 
ತೀವ್ರ ಬಿಸಿಲಿನ ತಾಪ ಎದುರಿಸುತ್ತಿರುವ ಉತ್ತರ ಭಾರತದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಗುರುಗ್ರಾಮದಲ್ಲಿಯೂ ನೀರಿಗೆ ಕೊರತೆ ಉಂಟಾಗಿದ್ದು ವಿರಾಟ್ ಕೊಹ್ಲಿ ಮನೆಯಲ್ಲಿ ಅರ್ಧ ಡಜನ್ (6 ಕಾರು) ಕಾರುಗಳನ್ನು ಸ್ವಚ್ಛಗೊಳಿಸಲು ಸಾವಿರಾರು ಲೀಟರ್ ಗಳಷ್ಟು ನೀರನ್ನು ಪೂಲು ಮಾಡಿದ್ದರು ಎಂದು ಕೊಹ್ಲಿ ನೆರೆ ಮನೆಯವರು ದೂರು ನೀಡಿದ್ದರು.  
ದೂರು ನೀಡಿದ್ದ ಹಿನ್ನೆಲೆಯಲ್ಲಿ ನಗರ ನಿಗಮದ ಜೂನಿಯರ್ ಇಂಜಿನಿಯರ್ ಅಮಾನ್ ಫೊಗಟ್ ಸ್ಥಳಕ್ಕೆ ಆಗಮಿಸಿ ಕೊಹ್ಲಿ ಮನೆಯಲ್ಲಿ ನೀರು ಪೂಲು ಮಾಡುತ್ತಿದ್ದ ಮೆನೆಕೆಲಸದವರಿಗೆ ದಂಡ ವಿಧಿಸಿದ್ದಾರೆ. ನೀರು ಪೋಲು ಮಾಡುತ್ತಿರುವವರಿಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com