ಕೇನ್ ವಿಲಿಯಮ್ಸನ್
ಕ್ರಿಕೆಟ್
ಕೇನ್ ವಿಲಿಯಮ್ಸನ್ ಕ್ರೀಡಾ ನೈತಿಕತೆ ಬಗ್ಗೆ ಪ್ರಶ್ನಿಸಿದ ಪಾಲ್ ಆ್ಯಡಮ್ಸ್
ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿ ನ್ಯೂಜಿಲೆಂಡ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಕೇನ್ ವಿಲಿಯಮ್ಸನ್...
ಬರ್ಮಿಂಗ್‌ಹ್ಯಾಮ್: ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿ ನ್ಯೂಜಿಲೆಂಡ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಕೇನ್ ವಿಲಿಯಮ್ಸನ್ ಅವರ ಕ್ರೀಡಾ ನೈತಿಕತೆ ಬಗ್ಗೆ ಆಫ್ರಿಕಾ ಮಾಜಿ ಸ್ಪಿನ್ನರ್ ಪಾಲ್ ಆ್ಯಡಮ್ಸ್ ಪ್ರಶ್ನಿಸಿದ್ದಾರೆ.
ಬುಧವಾರ ದಕ್ಷಿಣ ಆಫ್ರಿಕಾ ನೀಡಿದ್ದ 242 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್(106 ರನ್) ಅವರ ಶತಕದ ಬಲದಿಂದ ಗೆಲುವಿನ ದಡ ಸೇರಿತ್ತು. ಕಿವಿಸ್ ನಾಯಕನ ಇನಿಂಗ್ಸ್‌ನಲ್ಲಿ ಒಂದು ಸಿಕ್ಸ್ ಹಾಗೂ ಒಂಬತ್ತು ಬೌಂಡರಿಗಳಿದ್ದವು. ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ ಕಿವಿಸ್ ಗೆದ್ದು ಬೀಗಿತ್ತು.
ಆದರೆ, ಈ ಪಂದ್ಯದಲ್ಲಿ ಇಮ್ರಾನ್ ತಾಹಿರ್‌ನ 38ನೇ ಓವರ್‌ನಲ್ಲಿ ಕೇನ್ ವಿಲಿಯಮ್ಸನ್ ಅವರು ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದ್ದರು. ಈ ವೇಳೆ ಬ್ಯಾಟ್‌ಗೆ ಚೆಂಡು ತಾಗಿರುವುದು ಆಟಗಾರರಿಗೆ ಸ್ಪಷ್ಟವಾಗಿರಲಿಲ್ಲ. ಹಾಗಾಗಿ ತೀರ್ಪುಗಾರರಿಗೆ ಆಫ್ರಿಕಾ ಆಟಗಾರರು ಬಲವಾಗಿ ಮನವಿ ಸಲ್ಲಿಸಿರಲಿಲ್ಲ. ಆದರೆ, ಟಿವಿ ರೀಪ್ಲೆನಲ್ಲಿ ಬ್ಯಾಟ್‌ಗೆ ಚೆಂಡು ತಾಗಿರುವುದು ಸ್ಪಷ್ಟವಾಗಿತ್ತು.
ಈ ಕುರಿತು ಟ್ವಿಟ್ ಮಾಡಿರುವ ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ಆ್ಯಡಮ್ಸ್, "ಔಟ್ ಎಂದು ಗೊತ್ತಿದ್ದರೂ ವಿಲಿಯಮ್ಸನ್ ಅವರು ಕ್ರೀಸ್ ತೊರೆದಿಲ್ಲ. ಈ ಕುರಿತು ಅವರು ಅಸಮಾಧಾನಗೊಂಡಿದ್ದಾರೆಯೇ" ಚೆಂಡು ಬ್ಯಾಟ್‌ಗೆ ತಾಗಿರುವುದು ಗೊತ್ತಿದ್ದರೂ ಅವರು ಏಕೆ ಕ್ರೀಸ್ ಬಿಡಲಿಲ್ಲ. ಅವರಿಗೆ ಕ್ರೀಡಾ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ್ದ ಫಾಫ್ ಡುಪ್ಲೆಸಿಸ್ ಅವರು ವಿಕೆಟ್ ಕೀಪರ್ ಡಿ ಕಾಕ್ ಅವರ ತೀರ್ಮಾನದ ಮೇಲೆ ನಂಬಿಕೆ ಇತ್ತು. ಹಾಗಾಗಿ, ಮರುಪರಿಶೀಲನೆ ಮೊರೆ ಹೋಗಲಿಲ್ಲ ಎಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ