ವಿಶ್ವಕಪ್ ಕ್ರಿಕೆಟ್: ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಬದಲು ಧೋನಿ ಸೂಕ್ತ, ಡೀನ್‌ ಜೋನ್ಸ್‌ ಸಲಹೆ

ಐಸಿಸಿ ವಿಶ್ವಕಪ್‌ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಬದಲು ಮಹೇಂದ್ರ ಸಿಂಗ್‌ ಧೋನಿ ಆಡಬೇಕು ಎಂದು ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್‌ಮನ್‌ ಡೀನ್‌ ಜೋನ್ಸ್‌ ಅಭಿಪ್ರಾಯಪಟ್ಟಿದ್ದಾರೆ.
ಮಹೇಂದ್ರ ಸಿಂಗ್‌ ಧೋನಿ
ಮಹೇಂದ್ರ ಸಿಂಗ್‌ ಧೋನಿ
Updated on
ಮುಂಬೈ: ಐಸಿಸಿ ವಿಶ್ವಕಪ್‌ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಬದಲು ಮಹೇಂದ್ರ ಸಿಂಗ್‌ ಧೋನಿ ಆಡಬೇಕು ಎಂದು ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್‌ಮನ್‌ ಡೀನ್‌ ಜೋನ್ಸ್‌ ಅಭಿಪ್ರಾಯಪಟ್ಟಿದ್ದಾರೆ. 
ಇಂಗ್ಲೆಂಡ್‌ನಲ್ಲಿನ ಪಿಚ್‌ಗಳು ಟೂರ್ನಿಯ ಮೊದಲಾರ್ಧದ ಬಳಿಕ ನಿಧಾನಗತಿಯತ್ತ ತಿರುಗುತ್ತಿದೆ. ಹಾಗಾಗಿ, ಸ್ಟಾರ್‌ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಹೆಚ್ಚುವರಿ ಸ್ಪಿನ್ನರ್‌ ಆಗಿ ಆಡಿಸಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದ್ದಾರೆ. 
"ಯಶಸ್ವಿಯಾಗಿ ಮುನ್ನಗ್ಗುತ್ತಿರುವ ತಂಡದ ಬಗ್ಗೆ ಏನೂ ಹೇಳಲು ಬಯಸುವುದಿಲ್ಲ. ಆದರೆ, ಶಿಖರ್‌ ಧವನ್‌ ಅವರ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ಮತ್ತೇ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಮಸ್ಯೆಯಾಗಿದೆ. ಹಾಗಾಗಿ, ನಾಲ್ಕನೇ ಕ್ರಮಾಂಕದಲ್ಲಿ ಧೋನಿ ಆಡಿಸುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಜತೆಗೆ, ರವೀಂದ್ರ ಜಡೇಜಾ ಅವರನ್ನು ಹೆಚ್ಚುವರಿ ಸ್ಪಿನ್ನರ್‌ ಆಗಿ ಕಣಕ್ಕೆ ಇಳಿಸಬೇಕು ಎಂದು ಜೋನ್ಸ್‌ ಸ್ಟಾರ್‌ ಸ್ಪೋರ್ಟ್ಸ್‌ ನೇರಪ್ರಸಾರ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. 
"ಸತತ ಪಂದ್ಯಗಳಿಂದಾಗಿ ಇಲ್ಲಿನ ಪಿಚ್‌ಗಳು ದಣಿದಿವೆ. ಹಾಗಾಗಿ, ಎಡಗೈ ಬ್ಯಾಟ್ಸ್‌ಮನ್‌ಗಳು ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ತಂಡಕ್ಕೆ ನೆರವಾಗಬಹುದು. ಎಡಗೈ ಬ್ಯಾಟ್ಸ್‌ಮನ್‌ಗೆ ಒಂದು ಅವಕಾಶ ನೀಡುವುದು ಲಾಭವಾಗಬಹುದು ಎಂಬುದನ್ನು ನಂಬಿದ್ದೇನೆ ಎಂದರು. 
ಇದಕ್ಕೂ ಮುನ್ನ ರೋಹಿತ್‌ ಶರ್ಮಾ ಅವರು ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದು ಹೇಳಿದ್ದರು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಆಗಿರುವುದರಿಂದ ಅವರಿಗೆ ಈ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಸುಲಭವಾಗುತ್ತದೆ. ಇರ್ಪಾನ್‌ ಫಠಾಣ್‌ ಈ ಹಿಂದೆ ದಿನೇಶ್‌ ಕಾರ್ತಿಕ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸಲಹೆ ನೀಡಿದ್ದರು. 
ವಿಜಯ್‌ ಶಂಕರ್‌ ಸತತ ಎರಡು ಪಂದ್ಯಗಳಲ್ಲಿ ವಿಫಲರಾಗಿರುವುದರಿಂದ ಇದೀಗ ನಾಲ್ಕನೇ ಕ್ರಮಾಂಕದ ಸಮಸ್ಯೆ ಎದುರಾಗಲು ಕಾರಣವಾಗಿದೆ. ಇವರು ಅಫ್ಘಾನಿಸ್ತಾನದ ವಿರುದ್ಧ 29 ರನ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ ಕಳೆದ ಪಂದ್ಯದಲ್ಲಿ 14 ರನ್‌ ಗಳಿಸಿದ್ದರು. ಮುಂದಿನ ಪಂದ್ಯ ಬಲಿಷ್ಠ ಇಂಗ್ಲೆಂಡ್ ಆಗಿದ್ದರಿಂದ ಭಾರತಕ್ಕೆ ಇದೀಗ ನಾಲ್ಕನೇ ಕ್ರಮಾಂಕದ ಬಿಸಿ ತಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com