ದುಬೈ: ಟೀಂ ಇಂಡಿಯಾದ ಮಾಜಿ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಕ್ರಿಕೆಟ್ ಕಮಿಟಿಯ ಮುಖ್ಯಸ್ಥರಾಗಿ ಮರು ನೇಮಕವಾಗಿದ್ದಾರೆ.
ಅನಿಲ್ ಕುಂಬ್ಳೆ ಮತ್ತೆ ಮೂರು ವರ್ಷಗಳ ಕಾಲ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆರು ದಿನಗಳ ಕಾಲ ದುಬೈನಲ್ಲಿ ನಡೆದ ಐಸಿಸಿ ಮೀಟಿಂಗ್ ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ 2012ರಲ್ಲಿ ಕುಂಬ್ಳೆ ಐಸಿಸಿ ಕ್ರಿಕೆಟ್ ಕಮಿಟಿ ಚೇರ್ ಮನ್ ಆಗಿ ನೇಮಕಗೊಂಡಿದ್ದರು.
18 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅನಿಲ್ ಕುಂಬ್ಳೆ 132 ಟೆಸ್ಟ್ ನಲ್ಲಿ 619 ವಿಕೆಟ್ ಪಡೆದಿದ್ದಾರೆ. ಇನ್ನು 271 ಏಕದಿನ ಕ್ರಿಕೆಟ್ ನಲ್ಲಿ 337 ವಿಕೆಟ್ ಗಳನ್ನು ಪಡೆದಿದ್ದಾರೆ.