ಐಸಿಸಿ ಟೆಸ್ಟ್‌ ರ್ಯಾಂಕಿಂಗ್: ಅಗ್ರ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ(ಐಸಿಸಿ) ಬುಧವಾರ ಎಂಆರ್‌ಎಫ್‌ ಟಾಯರ್ಸ್ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು,...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ(ಐಸಿಸಿ) ಬುಧವಾರ ಎಂಆರ್‌ಎಫ್‌ ಟಾಯರ್ಸ್ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಅಗ್ರ ಸ್ಥಾನ ಹಾಗೂ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 
ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ರಾಸ್‌ ಟೇಲರ್‌ 11 ಸ್ಥಾನಗಳಲ್ಲಿ ಏರಿಕೆ ಕಂಡು 13ನೇ ಸ್ಥಾನದಲ್ಲಿದ್ದಾರೆ. ಶತಕ ಸಿಡಿಸಿದ ಹೆನ್ರಿ ನಿಕೋಲ್ಸ್‌ (778 ಅಂಕ) ಎರಡು ಸ್ಥಾನಗಳನ್ನು ಜಿಗಿದು ಐದನೇ ಶ್ರೇಯಾಂಕ ಪಡೆದಿದ್ದಾರೆ.
ನ್ಯೂಜಿಲೆಂಡ್‌ ವಿರುದ್ಧ 13 ಹಾಗೂ 67 ರನ್‌ ಗಳಿಸಿದ ಬಾಂಗ್ಲಾದೇಶದ ಮಹ್ಮುದುಲ್ಹಾ ಆರು ಸ್ಥಾನಗಳನ್ನು ಜಿಗಿಯುವ ಮೂಲಕ 34ನೇ ಶ್ರೇಯಾಂಕ ಪಡೆದಿದ್ದಾರೆ. ಆ ಮೂಲಕ ಅವರು ವೃತ್ತಿ ಜೀವನದ ಶ್ರೇಷ್ಠ ಸ್ಥಾನ ಅಲಂಕರಿಸಿದರು. ಶಾದ್ಮಾನ್‌ ಇಸ್ಲಾಂ ಅವರು 98 ನೇ ಸ್ಥಾನದಿಂದ 102ನೇ ಸ್ಥಾನಕ್ಕೆ ಜಿಗಿದಿದ್ದು, ಮೊಹಮ್ಮದ್‌ ಮಿಥುನ್‌ 115 ಸ್ಥಾನಗಳಿಂದ 140 ನೇ ಶ್ರೇಯಾಂಕ ಪಡದುಕೊಂಡಿದ್ದಾರೆ. 
ಇನ್ನು, ಬಾಂಗ್ಲಾ ವೇಗಿ ಬೌಲಿಂಗ್‌ ವಿಭಾಗದಲ್ಲಿ  ವೇಗಿ ಅಬು ಜಹೇದ್‌ 18 ಸ್ಥಾನಗಳಲ್ಲಿ ಏರಿಕೆ ಕಂಡು 77ನೇ ಸ್ಥಾನ ಪಡೆದುಕೊಂಡಿದ್ದಾರೆ. 
ವೆಲ್ಲಿಂಗ್ಟನ್‌ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೇಲರ್‌, ನಿಕೋಲ್ಸ್ ಹಾಗೂ ಮಹ್ಮುದುಲ್ಹಾ ಅವರು ಐಸಿಸಿ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಕಿವಿಸ್‌ನ ನೀಲ್‌ ವ್ಯಾಗ್ನರ್‌ ಅವರು ಒಟ್ಟು ಒಂಬತ್ತು ವಿಕೆಟ್‌ಗಳನ್ನು ಉರುಳಿಸುವ ಮೂಲಕ ವೃತ್ತಿ ಜೀವನದ ಐದನೇ ಶ್ರೇಷ್ಠ ಶ್ರೇಯಾಂಕ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com