ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ

ಪಾಕಿಸ್ತಾನ ಸೂಪರ್ ಲೀಗ್ ನೇರ ಪ್ರಸಾರವನ್ನು ಕಳೆದ ತಿಂಗಳು ಭಾರತ ಸ್ಥಗಿತಗೊಳಿಸಿತ್ತು. ಈಗ ಇದಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಎಲ್ ನೇರ ಪ್ರಸಾರವನ್ನು ಪಾಕಿಸ್ತಾನ ಕೂಡಾ ನಿಷೇಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪಾಕಿಸ್ತಾನ ಸೂಪರ್ ಲೀಗ್  ನೇರ ಪ್ರಸಾರವನ್ನು  ಕಳೆದ ತಿಂಗಳು ಭಾರತ ಸ್ಥಗಿತಗೊಳಿಸಿತ್ತು. ಈಗ ಇದಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಎಲ್ ನೇರ ಪ್ರಸಾರವನ್ನು ಪಾಕಿಸ್ತಾನ ಕೂಡಾ ನಿಷೇಧಿಸಿದೆ. ಪಾಕಿಸ್ತಾನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪಾವದ್ ಚೌದರಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ  ಪಾಕಿಸ್ತಾನ ಮೂಲದ  ಟಿ-20 ಪಂದ್ಯವನ್ನು ವಿಶ್ವ ಪ್ರಸಾರ ಮಾಡುವ ಒಪ್ಪಂದದಿಂದ ಭಾರತೀಯ ಕಂಪನಿ ಐಎಂಜಿ ರಿಲಯನ್ಸ್  ಹೊರಬಂದಿತ್ತು. ಪಾಕಿಸ್ತಾನ ಸೂಪರ್ ಲೀಗ್ಸ್ ಸಂದರ್ಭದಲ್ಲಿ  ಭಾರತೀಯ ಕಂಪನಿಗಳು ಹಾಗೂ ಸರ್ಕಾರ ಹೀಗೆಲ್ಲಾ ವರ್ತಿಸಿದ್ದರಿಂದ ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರವನ್ನು ನಾವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು  ಪಾವದ್ ಚೌದರಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡ ಕ್ರಿಕೆಟ್ ನ್ನು ರಾಜಕೀಯಗೊಳಿಸುತ್ತಿದೆ ಎಂದು ಚೌದರಿ ಆರೋಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಸರಣಿಯ ಸಂದರ್ಭದಲ್ಲಿ ಸೈನಿಕರ ಕ್ಯಾಪ್ ತೊಟ್ಟಿದ್ದ ಟೀಂ ಇಂಡಿಯಾ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಐಸಿಸಿಯನ್ನು  ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒತ್ತಾಯಿಸಿತ್ತು. ಆದಾಗ್ಯೂ, ಈ ಸಂಬಂಧ ಬಿಸಿಸಿಐ ಅನುಮತಿ ಪಡೆದಿತ್ತು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರ ನಿಷೇಧದಿಂದ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ಗೆ ನಷ್ಟವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾವು ಕೂಡಾ ಸೂಪರ್ ಪವರ್ ರಾಷ್ಟ್ರವಾಗಿದ್ದೇವೆ ಎಂದು ಪಾವದ್ ಚೌದರಿ ಹೇಳಿದ್ದಾರೆ.
12 ನೇ ಆವೃತ್ತಿಯ ಐಪಿಎಲ್ ನಾಳೆಯಿಂದ ಆರಂಭವಾಗಲಿದ್ದು, ರಾಯಲ್ಸ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಆರಂಭಿಕ ಪಂದ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com