ಸಾಂದರ್ಭಿಕ ಚಿತ್ರ
ಕ್ರಿಕೆಟ್
ಐಪಿಎಲ್ ಪಂದ್ಯಗಳ ವೀಕ್ಷಣೆಗೆ 60 ಯೋಧರಿಗೆ ಕೆಎಸ್‌ಸಿಎ ಉಚಿತ ಆಹ್ವಾನ
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಿಂದ ಮೇ 4ರವರೆಗೆ ನಡೆಯುವ ಏಳು ಪಂದ್ಯಗಳ ಉಚಿತ ವೀಕ್ಷಣೆಗೆ 60 ಯೋಧರನ್ನು...
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಿಂದ ಮೇ 4ರವರೆಗೆ ನಡೆಯುವ ಏಳು ಪಂದ್ಯಗಳ ಉಚಿತ ವೀಕ್ಷಣೆಗೆ 60 ಯೋಧರನ್ನು ಆಹ್ವಾನಿಸಲು ಕರ್ನಾಟಕ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ನಿರ್ಧರಿಸಿದೆ.
ಸದ್ಭಾವನಾ ಧ್ಯೋತಕವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಮತ್ತು ಭಾರತಿ ಸಿಮೆಂಟ್ಸ್ ಸಹಯೋಗದಲ್ಲಿ ಕೆಎಸ್ ಸಿಎ ಯೋಧರಿಗೆ ಈ ಆಹ್ವಾನ ನೀಡುತ್ತಿದೆ.
ಪಂದ್ಯಗಳನ್ನು ವೀಕ್ಷಿಸಲು ಕೆಎಸ್ ಸಿಎ 20 ಯೋಧರಿಗೆ ಪ್ರಾಯೋಜಕತ್ವ ವಹಿಸುತ್ತಿದ್ದು, ಆರ್ ಸಿಬಿ ಮತ್ತು ಭಾರತಿ ಸಿಮೆಂಟ್ಸ್ ತಲಾ 20 ಯೋಧರ ಪ್ರಾಯೋಜಕತ್ವ ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ