ಹಾರ್ದಿಕ್ ಪಾಂಡ್ಯಗೆ 'ಸಹೋದರ' ಎಂದು ಹೇಳಿ ಟ್ರೋಲ್ ಆದ ನಟಿ ಕ್ರಿಸ್ಟಲ್!

ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫೋಟೋ ಹಾಕಿ ಕಿರುತೆರೆ ನಟಿ ಕ್ರಿಸ್ಟಲ್ ಡಿಸೋಜಾ ಇದೀಗ ನೆಟಿಗರಿಂದ ಟ್ರೋಲ್ ಗೆ ಗುರಿಯಾಗಿದ್ದಾರೆ.
ಕ್ರಿಸ್ಟಲ್ ಡಿಸೋಜಾ-ಹಾರ್ದಿಕ್ ಪಾಂಡ್ಯ
ಕ್ರಿಸ್ಟಲ್ ಡಿಸೋಜಾ-ಹಾರ್ದಿಕ್ ಪಾಂಡ್ಯ
Updated on: 
ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫೋಟೋ ಹಾಕಿ ಕಿರುತೆರೆ ನಟಿ ಕ್ರಿಸ್ಟಲ್ ಡಿಸೋಜಾ ಇದೀಗ ನೆಟಿಗರಿಂದ ಟ್ರೋಲ್ ಗೆ ಗುರಿಯಾಗಿದ್ದಾರೆ. 
ಹಾರ್ದಿಕ್ ಪಾಂಡ್ಯ ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿರುವ ಕ್ರಿಸ್ಟಲ್ ಅದರಲ್ಲಿ ಸಹೋದರನೆಂದು ಪಾಂಡ್ಯರನ್ನು ಕರೆದಿರುವುದಕ್ಕೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ನಿರೂಪಣೆಯ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರಿಗೆ ಅವಹೇಳನ ಮಾಡಿದ್ದ ಹಾರ್ದಿಕ್ ಪಾಂಡ್ಯಗೆ ಶಿಕ್ಷೆಯಾಗಿದೆ ಆದರೆ ಜನರು ಮಾತ್ರ ಇನ್ನೂ ಅದನ್ನು ಮರೆತಿಲ್ಲ. ಪಾಂಡ್ಯ ಫೋಟೋ ಹಾಕಿ ಜೊತೆಗೆ ಸಹೋದರ ಎಂದು ಬರೆದು ಒಳ್ಳೆಯದು ಮಾಡಿದ್ದೀರಿ ಎಂದು ಕೆಲವರು ಆಡಿಕೊಂಡಿದ್ದರೇ ಇನ್ನು ಕೆಲವರು ಪಾಂಡ್ಯ ಬಣ್ಣವನ್ನು ಟೀಕಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ನೀವು ಯಾಕೆ ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ಕೆಲ ನೆಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲವರು ವಿಶ್ವಕಪ್ ಸಮಯದಲ್ಲಿ ಇಂಥ ಕಮೆಂಟ್ ಗಳು ಬೇಡವೆಂದಿದ್ದಾರೆ.
ಇನ್ನು ತಮ್ಮ ಫೋಟೋ ಕುರಿತು ನೆಟಿಗರು ಟ್ರೋಲ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಕ್ರಿಸ್ಟಲ್ ಪರದೆಯ ಹಿಂದೆ ಕಮೆಂಟ್ ಮಾಡಿ ಬಚಾವ್ ಆಗುತ್ತೇವೆಂದು ಈ ಜನರು ಭಾವಿಸಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com