ಸಂಗ್ರಹ ಚಿತ್ರ
ಕ್ರಿಕೆಟ್
ಅತ್ಯುತ್ತಮ ಪ್ರದರ್ಶನ ನೀಡಿದ್ರೂ ನನಗೇಕೆ ಈ ಶಿಕ್ಷೆ? ಬಿಸಿಸಿಐಗೆ ಯುವ ಕ್ರಿಕೆಟಿಗ ನೋವಿನ ಟ್ವೀಟ್!
ರಣಜಿ ಹಾಗೂ ದೇಸಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು ಭಾರತ ಎ ತಂಡಕ್ಕೆ ನನ್ನನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಯುವ ಕ್ರಿಕೆಟಿಗನೊಬ್ಬ ಬಿಸಿಸಿಐಗೆ ಟ್ವೀಟ್ ಮೂಲಕ ತಮ್ಮ ನೋವನ್ನು ಹೊರ...
ಇಂದೋರ್: ರಣಜಿ ಹಾಗೂ ದೇಸಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು ಭಾರತ ಎ ತಂಡಕ್ಕೆ ನನ್ನನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಯುವ ಕ್ರಿಕೆಟಿಗನೊಬ್ಬ ಬಿಸಿಸಿಐಗೆ ಟ್ವೀಟ್ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ಬಿಸಿಸಿಐ ಶ್ರೀಲಂಕಾ ಎ ಹಾಗೂ ವೆಸ್ಟ್ ಇಂಡೀಸ್ ಎ ವಿರುದ್ಧದ ಸರಣಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಿತ್ತು. ಭಾರತ ಎ ತಂಡದಲ್ಲಿ ತಮಗೆ ಸ್ಥಾನ ಸಿಗುತ್ತದೆ ಎಂದು ನಂಬಿಕೊಂಡಿದ್ದ ಜಲಜ್ ಸಕ್ಸೆನಾಗೆ ತೀವ್ರ ನಿರಾಸೆಯಾಗಿದೆ.
ಇದರಿಂದ ಜಲಜ್ ಕೂಡಲೇ ಬಿಸಿಸಿಐಗೆ ಟ್ವೀಟ್ ಮಾಡಿ ನಾನು ಏನು ತಪ್ಪು ಮಾಡಿದೆ? ನನಗೆ ಯಾಕೆ ಈ ಶಿಕ್ಷೆ? ರಣಜಿ ಮತ್ತು ದೇಶಿ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು ನನ್ನನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿದ ಜಲಜ್ ರಣಜಿ ಮತ್ತು ದೇಸಿ ಕ್ರಿಕೆಟ್ ನಲ್ಲಿ ತಮ್ಮ ಸಾಧನೆಯ ಕುರಿತು ಟ್ವೀಟ್ ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ರಣಜಿ ಟ್ರೋಫಿಯಲ್ಲಿ 193 ವಿಕೆಟ್ ಗಳನ್ನು ಪಡೆದಿದ್ದು ಗರಿಷ್ಠ ವಿಕೆಟ್ ಕಬಳಿಸಿದ್ದೇನೆ. ಇನ್ನು ಬ್ಯಾಟಿಂಗ್ ನಲ್ಲಿ 46ರ ಸರಾಸರಿಯಲ್ಲಿ 3 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದು ಕಳೆದ ರಣಜಿಯಲ್ಲಿ ಮೂರು ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪಡೆದಿದ್ದೇನೆ ಎಂದು ಟ್ವೀಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ