ಐಸಿಸಿ ವಿಶ್ವಕಪ್‌ 2019: ಈ 5 ಬ್ಯಾಟ್ಸ್‌ಮನ್‌ಗಳ ಅಬ್ಬರವೇ ತಂಡಗಳ ಗೆಲುವಿಗೆ ಮುಖ್ಯ!

ಇದೇ 30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆರಂಭವಾಗುವ ಐಸಿಸಿ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ನದ್ದು ಅತ್ಯಂತ ಪ್ರಮುಖ ಪಾತ್ರ. ಹಾಗಾಗಿ, ಒಟ್ಟು 10 ತಂಡಗಳಲ್ಲಿನ ಬ್ಯಾಟ್ಸ್‌ಮನ್‌ಗಳ ಸ್ಥಿರ ಪ್ರದರ್ಶನ...
ಕೊಹ್ಲಿ-ಟೇಲರ್-ರೂಟ್-ಸ್ಮಿತ್-ಡಿ ಕಾಕ್
ಕೊಹ್ಲಿ-ಟೇಲರ್-ರೂಟ್-ಸ್ಮಿತ್-ಡಿ ಕಾಕ್
ಇದೇ 30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆರಂಭವಾಗುವ ಐಸಿಸಿ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ನದ್ದು ಅತ್ಯಂತ ಪ್ರಮುಖ ಪಾತ್ರ. ಹಾಗಾಗಿ, ಒಟ್ಟು 10 ತಂಡಗಳಲ್ಲಿನ ಬ್ಯಾಟ್ಸ್‌ಮನ್‌ಗಳ ಸ್ಥಿರ ಪ್ರದರ್ಶನ ಹಾಗೂ ಅಂಕಿ ಅಂಶಗಳ ಆಧಾರದ ಮೇಲೆ ವಿಶ್ವಕಪ್‌ ಟೂರ್ನಿಯಲ್ಲಿ ಐದು ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. 
1.ವಿರಾಟ್‌ ಕೊಹ್ಲಿ:  
ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳು ಎಂದಾದ ಮೊದಲು ನೆನಪಾಗುವುದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ. ಏಕೆಂದರೆ, 2015ರ ವಿಶ್ವಕಪ್‌ ನಿಂದ ಇಲ್ಲಿವರೆಗೂ 78.29 ಸರಾಸರಿಯಲ್ಲಿ ಒಟ್ಟು 4,306 ರನ್‌ ಸಿಡಿಸಿದ್ದಾರೆ. ಈ ಅವಧಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆ ಕೊಹ್ಲಿ ಹೆಸರಿನಲ್ಲಿದೆ. ಜತೆಗೆ, ಕಳೆದ ವಿಶ್ವ ಕಪ್‌ನಿಂದ ಇಲ್ಲಿಯವರೆಗೂ ಒಟ್ಟು 19 ಶತಕಗಳು ಸಿಡಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕೊಹ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾದರೂ, ಕಳೆದ ಬೇಸಿಗೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಹಾಗಾಗಿ, ಪ್ರಸ್ತುತ ವಿಶ್ವಕಪ್‌ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ. 
2. ರಾಸ್‌ ಟೇಲರ್‌: 
2015ರ ಏಪ್ರಿಲ್‌ನಿಂದ ಇಲ್ಲಿಯವರೆಗೂ ನ್ಯೂಜಿಲೆಂಡ್‌ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ರಾಸ್‌ ಟೇಲರ್‌ ಅತ್ಯುತ್ತಮರು. ಕಳೆದ ವಿಶ್ವಕಪ್‌ನಿಂದ ಇಲ್ಲಿಯವರೆಗೂ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ರಾಸ್‌ ಟೇಲರ್‌ ಐದನೇ ಸ್ಥಾನದಲ್ಲಿದ್ದಾರೆ. 56 ಇನಿಂಗ್ಸ್‌ಗಳಲ್ಲಿ ಟೇಲರ್‌ 68.85 ಸರಾಸರಿಯಲ್ಲಿ 2, 892 ರನ್‌ ದಾಖಲಿಸಿದ್ದಾರೆ. ಪಂದ್ಯದಲ್ಲಿ ಮೊದಲು ಇವರು ನಿಧಾನವಾಗಿ ಇನಿಂಗ್ಸ್‌ ಕಟ್ಟಿದರೂ ಒಮ್ಮೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಹೂರಿದ್ದೇ ಆದಲ್ಲಿ ಎದುರಾಳಿ ಬೌಲರ್‌ಗಳ ಪಾಲಿಗೆ ಸಿಂಹ ಸ್ವಪ್ನವಾಗಲಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಅವರು 831 ಅಂಕಗಳೊಂದಿಗೆ ಮೂರನೇ ಕ್ರಮಾಂಕದಲ್ಲಿದ್ದಾರೆ.
3. ಜೋ ರೂಟ್‌: 
ಇಂಗ್ಲೆಂಡ್‌ ಮೌಲ್ಯಯುತ ಬ್ಯಾಟ್ಸ್‌ಮನ್‌ ಎಂದರೆ ಜೋ ರೂಟ್‌ ಎಂದರೆ ತಪ್ಪಾಗರಾದರು. ಕಳೆದ 2015ರ ವಿಶ್ವಕಪ್ ಟೂರ್ನಿಯಿಂದ ಇಂಗ್ಲೆಂಡ್‌ ನಿರ್ಗಮಿಸಿದ ಅವಧಿಯಿಂದ ಇಲ್ಲಿಯವರೆಗೂ ರೂಟ್‌ ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾರೆ. 2015 ಹಾಗೂ 2019 ವಿಶ್ವಕಪ್‌ ಟೂರ್ನಿಗಳ ನಡುವೆ 69 ಏಕದಿನ ಇನಿಂಗ್ಸ್‌ಗಳನ್ನು ಆಡಿರುವ ರೂಟ್‌, ಒಟ್ಟು 3,288 ರನ್‌ ಪೇರಿಸಿದ್ದಾರೆ. ಅಂದಾಜು 60 ಸರಾಸರಿಯಲ್ಲಿ ರನ್‌ ಗಳಿಸಿರು ರೂಟ್‌, ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇಂಗ್ಲೆಂಡ್‌ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಉಳಿಯಲು ರೂಟ್‌ ಕೊಡುಗೆಯನ್ನು ಮರೆಯುವಂತಿಲ್ಲ. 
4. ಸ್ಟೀವ್‌ ಸ್ಮಿತ್‌:
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಕೂಡ ಪ್ರಸ್ತುತ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಮುಖರು. ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಂಡಿದ್ದ ಅವರು, ಭಾರತದಲ್ಲಿ ನಡೆದಿದ್ದ ಐಪಿಎಲ್‌ ಟೂರ್ನಿಯಲ್ಲಿ ಆಡುವ ಮೂಲಕ ಮತ್ತೇ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಾನು ಮತ್ತೆ ಲಯಕ್ಕೆ ಮರಳಿದ್ದೇನೆಂದು ಎಲ್ಲರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅವರ ಬ್ಯಾಟಿಂಗ್‌ ಶೈಲಿ ವಿಶೇಷತೆಯಿಂದ ಕೂಡಿದೆ. ಯಾವುದೇ ಕ್ಲಿಷ್ಟ ಸಂದರ್ಭ ಎದುರಾದರೂ ಅದನ್ನು ಸಮರ್ಥವಾಗಿ ಮೆಟ್ಟಿ ನಿಂತು ತಂಡಕ್ಕೆ ಗೆಲುವು ತಂದುಕೊಡುವ ಸಾಮಾರ್ಥ್ಯ ಅವರಲ್ಲಿ ಕರಗತವಾಗಿದೆ. 
5.ಕ್ವಿಂಟಾನ್‌ ಡಿ ಕಾಕ್‌: 
ಕಳೆದ ಐಸಿಸಿ ವಿಶ್ವಕಪ್‌ ಟೂರ್ನಿಯಿಂದ ಇಲ್ಲಿವರೆಗೂ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟಾಲ್‌ ಡಿ ಕಾಕ್‌ ನಾಲ್ಕನೇ ಆಟಗಾರರಾಗಿದ್ದಾರೆ. ಈ ನಡುವೆ 62 ಏಕದಿನ ಪಂದ್ಯಗಳಾಡಿರುವ ಅವರು, 50.35 ಸರಾಸರಿಯಲ್ಲಿ ಒಟ್ಟು 2,971 ರನ್‌ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಸರಣಿಯಲ್ಲಿ ಡಿ ಕಾಕ್‌ ಐದು ಏಕದಿನ ಪಂದ್ಯಗಳಿಂದ ಒಂದು ಶತಕ ಹಾಗೂ ಮೂರು ಅರ್ಧ ಶತಕಗಳೊಂದಿಗೆ ಒಟ್ಟು 353 ರನ್‌ ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ ಕ್ವಿಂಟಾನ್ ಡಿ ಕಾಕ್‌ 11 ಪಂದ್ಯಗಳಲ್ಲಿ 393 ರನ್‌ ಗಳಿಸಿದ್ದರು. ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಆಗುವಲ್ಲಿ ಇವರ ಕೊಡುಗೆ ಮರೆಯುವಂತಿಲ್ಲ. ಸದ್ಯ ಉತ್ತಮ ಲಯದಲ್ಲಿರುವ ಇವರು ವಿಶ್ವಕಪ್‌ ಟೂರ್ನಿಯಲ್ಲೂ ಮೌಲ್ಯಯುತ ಬ್ಯಾಟ್ಸ್‌ಮನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com