ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

'ಕನಸುಗಳ ಬೆನ್ನಟ್ಟಿ ಹೋಗಿ, ನಿಮ್ಮ ಹೃದಯದ ಮಾತನ್ನು ಕೇಳಿ': ಹುಟ್ಟುಹಬ್ಬ ದಿನ ವಿರಾಟ್ ಕೊಹ್ಲಿ  ಭಾವನಾತ್ಮಕ ಪತ್ರ 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಂಗಳವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ 15 ವರ್ಷಗಳ ಜೀವನಾನುಭವದ ಬಗ್ಗೆ ಬರೆದುಕೊಂಡಿದ್ದಾರೆ. 
Published on

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಂಗಳವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ 15 ವರ್ಷಗಳ ಜೀವನಾನುಭವದ ಬಗ್ಗೆ ಬರೆದುಕೊಂಡಿದ್ದಾರೆ. ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದರ ಕಡೆಗೆ ಗಮನ ಕೇಂದ್ರೀಕರಿಸಿ ಹೃದಯದ ಮಾತುಗಳನ್ನು ಕೇಳಿ ಎಂದು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.


ನನ್ನ ಜೀವನದ 15 ವರ್ಷಗಳ ಜೀವನದ ಅನುಭವಗಳನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನನಗೆ ನಾನೆ ಬರೆದುಕೊಂಡ ಬರಹ, ಇದನ್ನೊಮ್ಮೆ ಓದಿ ಎಂದು ಅಭಿಮಾನಿಗಳ ಡೊತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಅವರ ಬರಹದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಮೊದಲು ಶುಭಾಶಯ ಹೇಳಿಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಏನಾಗುತ್ತದೆ, ಏನು ಫಲಿತಾಂಶ ಸಿಗುತ್ತದೆ ಎಂದು ಗೊತ್ತಿಲ್ಲದಿರುವುದರಿಂದ ಪ್ರತಿ ಅಚ್ಚರಿಗಳು ನಮಗೆ ಖುಷಿಯಾಗಿರುತ್ತದೆ. ಪ್ರತಿ ಸವಾಲುಗಳು ಥ್ರಿಲ್ಲಿಂಗ್ ಅನುಭವ ಕೊಡುತ್ತವೆ. ಪ್ರತಿ ಬೇಸರ, ದುಃಖ ಕಲಿಯುವ ಅವಕಾಶ. ಪ್ರತಿಯೊಬ್ಬರೂ ಪ್ರತಿ ಅವಕಾಶಗಳಿಗೆ ಸಿದ್ದರಾಗಿರಬೇಕು, ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.


ಹುಟ್ಟುಹಬ್ಬ ಸಂದರ್ಭದಲ್ಲಿ ನನ್ನ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳಿರಬಹುದು, ಆದರೆ ಅವುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ನೀವು ಮುಟ್ಟುವ ಗುರಿಗಿಂತ ನೀವು ಸಾಗುತ್ತಿರುವ ಪ್ರಯಾಣ ಅದ್ಭುತವಾಗಿರುತ್ತದೆ. ಜೀವನದಲ್ಲಿ ಹಲವು ವಿಷಯಗಳಿರುತ್ತವೆ. ಅವಕಾಶಗಳನ್ನು ಬಂದಾಗ ಅದನ್ನು ಬಾಚಿಕೊಳ್ಳಿ. ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಬೇಡಿ, ಹಾಗೆ ಮಾಡಿದರೆ ನೀವು ವಿಫಲರಾಗುತ್ತೀರಿ ಎಂದು ಬರೆದುಕೊಂಡಿದ್ದಾರೆ.


ಸೋಷಿಯಲ್ ಮೀಡಿಯಾಗಳಲ್ಲಿ ವಿರಾಟ್ ಕೊಹ್ಲಿಗೆ 74 ಮಿಲಿಯನ್ ಗಿಂತಲೂ ಅಧಿಕ ಅನುಯಾಯಿಗಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com