ಮರಾಠ ಅರೇಬಿಯನ್ಸ್
ಮರಾಠ ಅರೇಬಿಯನ್ಸ್

ಯುವರಾಜ್ ಸಿಂಗ್ ಆಡಿದ್ದ ಮರಾಠ ಅರೇಬಿಯನ್ಸ್‌ ಚೊಚ್ಚಲ ಟಿ10 ಚಾಂಪಿಯನ್

ವೆಸ್ಟ್‌ ಇಂಡೀಸ್ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ನಾಯಕತ್ವದ ಮರಾಠ ಅರೇಬಿಯನ್ಸ್‌ ತಂಡ ಇಲ್ಲಿ ಮುಕ್ತಾಯವಾದ ಟಿ10 ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಡೆಕ್ಕಾನ್ ಗ್ಲಾಡಿಯೇಟರ್ಸ್ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಅಬುದಾಬಿ: ವೆಸ್ಟ್‌ ಇಂಡೀಸ್ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ನಾಯಕತ್ವದ ಮರಾಠ ಅರೇಬಿಯನ್ಸ್‌ ತಂಡ ಇಲ್ಲಿ ಮುಕ್ತಾಯವಾದ ಟಿ10 ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಡೆಕ್ಕಾನ್ ಗ್ಲಾಡಿಯೇಟರ್ಸ್ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ಸ್‌ ಹಣಾಹಣಿಯಲ್ಲಿ ಯುವರಾಜ್ ಸಿಂಗ್, ಲಸಿತ್ ಮಲಿಂಗಾ ಕ್ರಿಸ್ ಲೀನ್ ಅವರನ್ನು ಒಳಗೊಂಡ ಮರಾಠ ಅರೇಬಿಯನ್ಸ್‌ ತಂಡ, ಎದುರಾಳಿ ಡೆಕ್ಕಾನ್ ಗ್ಲಾಾಡಿಯೇಟರ್ಸ್ ತಂಡವನ್ನು 10 ಓವರ್ ಗಳಿಗೆ 88 ರನ್ ಗಳಿಗೆ ನಿಯಂತ್ರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕಾನ್ ಗ್ಲಾಡಿಯೇಟರ್ಸ್ ತಂಡದ ಆರಂಭಿಕ ಮೊಹಮ್ಮದ್ ಶಹದಾಜ್ ಅವರು ಮಿಚೆಲ್ ಮೆಕ್‌ಗ್ಲೇನೆಂಘನ್ ಅವರ ಮೊದಲನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಕಳೆದ 9 ಇನಿಂಗ್ಸ್‌‌ಗಲ್ಲಿ  ಶಹದಾಜ್ ನಾಲ್ಕನೇ ಬಾರಿ ಮೊದಲನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ಮತ್ತೊಂದು ತುದಿಯಲ್ಲಿ ನಾಯಕ ಶೇನ್ ವ್ಯಾಟ್ಸನ್ ಬೇಗ ವಿಕೆಟ್ ಒಪ್ಪಿಸಿದರು. ಗ್ಲಾಡಿಯೇಟರ್ಸ್ ಪರ ಆಸಿಫ್ ಖಾನ್ 25 ರನ್ ಹಾಗೂ ಭನುಕ ರಾಜಪಕ್ಸ 23 ರನ್ ಗಳಿಸಿದರು. ಅಂತಿಮವಾಗಿ ಗ್ಲಾಡಿಯೇಟರ್ಸ್ ತಂಡ 10 ಓವರ್ ಗಳಿಗೆ 88 ರನ್ ಗಳಿಸಿತು.

Related Stories

No stories found.

Advertisement

X
Kannada Prabha
www.kannadaprabha.com