ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಸ್ಟನಿಂಗ್ ಕ್ಯಾಚ್ : ವಿಡಿಯೋ ವೈರಲ್ !
ಮೌಂಟ್ ಮೌಂಗನುಯಿ: ಬೇ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಮಿಚೆಲ್ ಸ್ಯಾಂಟ್ನರ್ ಅವರ ಸ್ಟನಿಂಗ್ ಕ್ಯಾಚಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐದನೇ ದಿನಾದಾಟವಾದ ಇಂದು ಎರಡನೇ ಇನ್ನಿಂಗ್ಸ್ ನಲ್ಲಿ ಎಡಗೈ ವೇಗಿ ನೀಲ್ ವ್ಯಾಗ್ನರ್ ಅವರ ಬೌಲಿಂಗ್ ನಲ್ಲಿ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಸ್ಟನಿಂಗ್ ಕ್ಯಾಚ್ ಮೂಲಕ ಓಲೈ ಪೊಪ್ ಅವರನ್ನು ಫೆವಿಲಿಯನ್ ಹಾದಿ ತೋರಿಸಿದರು.
ಬ್ಯಾಟಿನ ಅಂಚಿಗೆ ತಾಗಿದ ಬಾಲ್ ಮಿಚೆಲ್ ಸ್ಯಾಂಟ್ನರ್ ನಿಂತ ಕಡೆಗೆ ಹಾರಿತು. ಆದೇ ಸಂದರ್ಭದಲ್ಲಿ ಚಂಗನೆ ಮೇಲೆ ಹಾರಿದ ಸ್ಯಾಂಟ್ನರ್ ಚೆಂಡನ್ನು ಕ್ಯಾಚ್ ಹಿಡಿದು ಕುಣಿದು ಕುಪ್ಪಳಿಸಿದರು. ನಂತರ ಸಹ ಆಟಗಾರರು ಮಿಚೆಲ್ ಅವರನ್ನು ಅಭಿನಂದಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲ್ ಔಟ್ ಆಗಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಗೆ ಆಲ್ ಔಟ್ ಆಯಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್ ಹಾಗೂ 65 ರನ್ ಗಳ ಗೆಲುವು ಸಾಧಿಸಿತು.

